ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೋನಿಯಾ, ರಾಹುಲ್ಗೆ ಖರ್ಗೆ ಕೈಗೊಂಬೆ

Rashmi Kasaragodu
Updated On : 3 Apr 2014, 1:55 am

ಕನ್ನಡಪ್ರಭ ವಾರ್ತೆ  ಗುರುಮಠಕಲ್  ಏ.2
ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಮತ್ತು ರಾಹುಲ್ ಅವರ ಕೈಗೊಂಬೆ ಎಂದು ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಲೇವಡಿ ಮಾಡಿದರು.
  ಅವರು ಗುರುಮಠಕಲ್ ಮತಕ್ಷೇತ್ರದ ಯಲ್ಲೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
  ಬೆಳಮಗಿ ಬಿಜೆಪಿಯ ಗಿಳಿ ಎಂದು ಹೇಳಿದ್ದ ಖರ್ಗೆಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಗಿಳಿ ಪ್ರಾಮಾಣಿಕವಾಗಿರುತ್ತದೆ ಎಂದು ಜನ ನಂಬುತ್ತಾರೆ. ಆದರೆ ಗೊಂಬೆ, ಆಡಿಸುವರ ಕೈಯಲ್ಲಿರುತ್ತದೆ. ತನ್ನದೇ ಎಂಬ ಆಸ್ತಿತ್ವ ಇಲ್ಲದೇ ಆಡಿಸುವರ ಮರ್ಜಿಗೆ ತಕ್ಕಂತೆ ಕುಣಿಯುತ್ತದೆ. ಹಾಗೆಯೇ ಖರ್ಗೆಯವರ ಪರಿಸ್ಥಿತಿ ಆಗಿದೆ ಎಂದ ಅವರು ಖರ್ಗೆ ಕೇವಲ ನಾಟಕಕಾರ. ಆಡಿಸುವ ಸೂತ್ರದಾರಿಗಳು ಬೇರೆ ಇದ್ದಾರೆ ಎಂದರು.
ಆಶ್ಚರ್ಯಕರವಾಗಿದೆ: 371ನೇ ಕಲಂ ಖರ್ಗೆಯವರ ಸಾಧನೆಯಲ್ಲ. ಅದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. 371ನೇ ಕಲಂ ತಿದ್ದುಪಡಿಗಾಗಿ ಮನವರಿಕೆ ಮಾಡಲು ಖರ್ಗೆ ಒಂದು ಸಲವೂ ಕಮಿಟಿಯ ಹತ್ತಿರ ಬಂದಿಲ್ಲ. ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರೇ ಈ ವಿಷಯವನ್ನು ಹೇಳಿದ್ದ್ದಾರೆ. ನಾನು ಮತ್ತು ಧರಂಸಿಂಗ್, ಮೊಯ್ಲಿ ಮತ್ತು ಬಿಜೆಪಿ ಸರ್ಕಾರದ ಪ್ರತಿನಿಧಿಗಳು ಇದನ್ನು ಮನವರಿಕೆ ಮಾಡುವಲ್ಲಿ ಸಫಲಗೊಂಡೆವು. ಆದರೆ ಖರ್ಗೆ ಅವರಿಗೆ ಈ ಕ್ರೆಡಿಟ್ ಚುನಾವಣೆಯ ಗಿಮಿಕ್ ಆಗಿ ಕಾಂಗ್ರೆಸ್ನವರು ನೀಡುತ್ತಿರುವುದು ಆಶ್ಚರ್ಯಕರವಾಗಿದೆ ಎಂದರು.
ಚಿಂಚನಸೂರ್ ಸುಳ್ಳಿನ ಸರದಾರ: ಬೆಳಮಗಿ ಅನಕ್ಷರಸ್ಥನಿದ್ದಾನೆ. ಲೋಕಸಭೆಯ ಮುಖ ನೋಡದ ಅವನಿಗೆ ಮತ ನೀಡಬೇಡಿ ಎಂದು ಬಹಿರಂಗ ಸಭೆಯಲ್ಲಿ ಪ್ರಚಾರ ಮಾಡುವ ಸಚಿವ ಬಾಬುರಾವ ಚಿಂಚನಸೂರ ಹೇಳಿಕೆಗೆ ತಿರುಗೇಟು ನೀಡಿದ ರೇವುನಾಯಕ, ಚಿಂಚನಸೂರ್ ಸುಳ್ಳಿನ ಸರದಾರ. ಜನರನ್ನು ಸುಳ್ಳಿನಿಂದ ಮರಳು ಮಾಡುವ ಕಲೆಗಾರ. ನಾನು ಅನಕ್ಷರಸ್ತನೆಂದು ಹೇಳುವ ಬಾಬೂರಾವ ವಿಧಾನಸಭೆಯಲ್ಲಿ ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ? ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎನ್ನುವುದನ್ನು ಮೊದಲು ಜನತೆಗೆ ತಿಳಿಸಲಿ. ನಾನು ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದೆ ಎನ್ನುವುದನ್ನು ಬಹಿರಂಗವಾಗಿ ಚರ್ಚೆಗೆ ಬಂದು ವಿವರಿಸಲಿ ಎಂದ ಅವರು ಜನರಿಗೆ ಅಭಿವೃದ್ಧಿ ಕೆಲಸ ಮಾಡುವ, ಸ್ವತಂತ್ರ ವಿವೇಚನೆ ಉಳ್ಳ ಗಾರುಡಿಗ ಬೇಕಾಗಿದೆ ಎಂದು ಹೇಳಿದರು.  ಬಿಜೆಪಿ ಮುಖಂಡ ನಮೋಶಿ, ಅವ್ವಣ್ಣ ಮ್ಯಾಕೇರಿ, ವೆಂಕಟರೆಡ್ಡಿ ಮುದ್ನಾಳ,ವೆಂಕಟರೆಡ್ಡಿ ವಡವಟ್,ಶರಣಗೌಡ ಬಾಡಿಯಾಳ, ನೀಲಕಂಠರಾಯ ಎಲೇರಿ,ದೇವದಾಸ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement