ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಖರ್ಗೆ, ಧರಂರಿಂದ ಹೈ.ಕ. ಅಭಿವೃದ್ಧಿ'

Mainashree
Updated On : 4 Apr 2014, 10:49 am

ಚಿಂಚೋಳಿ: ರಾಜ್ಯದ ಅತಿ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಅವರು ನೀಡಿದ ಕೊಡುಗೆ ಅಪಾರ. ಅವರಿಬ್ಬರ ಗೆಲವು ಖಚಿತ ಎಂದು ವಿಧಾನಸಭಾ ಮಾಜಿ ಸಭಾಧ್ಯಕ್ಷ ರಮೇಶಕುಮಾರ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ವೀರೇಂದ್ರ ಪಾಟೀಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗುರುವಾರ ನಡೆದ ತಾಲೂಕ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ಎನ್. ಧರ್ಮಸಿಂಗ್ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಿಮ್ಮ ಮತ ಕನ್ಯಾದಾನಕ್ಕಿಂತಲೂ ಅತ್ಯಂತ ಶ್ರೇಷ್ಠವಾಗಿದೆ. ದೇಶದ ಬಡ ಜನತೆ ಬಗ್ಗೆ ಕಾಳಜಿ ಇರುವುದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಹೇಳಿದರು.
ಸಮಾವೇಶದಲ್ಲಿ ಸಚಿವ ಬಾಬುರಾವ ಚಿಂಚನಸೂರು, ಧರ್ಮಸಿಂಗ್, ಶಾಸಕ ಡಾ. ಉಮೇಶ ಜಾಧವ್, ಮಾಜಿ ಸಚಿವ ವೈಜನಾಥ ಪಾಟೀಲ್, ಬೀದರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಖಾಜಿ ಹರ್ಷದ್ ಅಲಿ, ಶಾಸಕ ಅಲ್ಲಮ ಪ್ರಭು ಪಾಟೀಲ್ ಮಾಜಿ ಶಾಸಕ ಕೈಲಾಶನಾಥ ಪಾಟೀಲ್, ಬಿ. ನಾರಾಯಣ ಮಾತನಾಡಿದರು.
ವಿಕ್ರಮ ಪಾಟೀಲ್, ಜಗದೇವ ಗುತ್ತೇದಾರ, ಬೀಮರಾವ ಟಿಟಿ. ಜರಣಪ್ಪಾ ಚಿಂಚೋಳಿ, ಕೆ.ಎಂ. ಬಾರಿ, ಶಿವಕುಮಾರ ಕೊಳ್ಳುರ, ಬಸವರಾಜ ಹೇರೂರ್, ಬಾಬುರಾವ ಪಾಟೀಲ್, ಬಸವರಾಜ ಮಲಿ, ಸವಿತಾ ಸಜ್ಜನ್, ಮಧುಸೂಧನರೆಡ್ಡಿ ಕಲ್ಲೂರ, ವೀರಾರೆಡ್ಡಿ ಕಲ್ಲೂರ, ಸಿ.ಬಿ. ಪಾಟೀಲ್ ಓಕಳಿ ಇತರರು ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ವೇದಿಕೆಯಲ್ಲಿದ್ದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಜಮಾದಾರ ಸ್ವಾಗತಿಸಿದರು. ಜಗದೀಶ ಠಾಕೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement