ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಧರಂ, ಖರ್ಗೆಗೆ ಕೂಲಿ ಗಿಟ್ಟಲ್ಲ್ಲ: ಬಾಬುರಾವ್

Mainashree
Updated On : 4 Apr 2014, 10:48 am

ಶಹಾಬಾದ್: ಮಲ್ಲಿಕಾರ್ಜುನ ಖರ್ಗೆ ಪ್ರಾರಂಭಿಸಿರುವ ಹೊಸ ರೈಲುಗಳಲ್ಲಿ ದಲಿತರು, ಬಡವರು ಕೂಲಿಗಾಗಿ ವಲಸೆ ಹೋಗಲು ಪ್ರಾರಂಭಿಸಿದ್ದಾರೆಂದು ಮಾಜಿ ಸಚಿವ ಬಾಬುರಾವ ಚವಾಣ ವ್ಯಂಗ್ಯವಾಡಿದರು.
ಅವರು ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಖರ್ಗೆ 40 ವರ್ಷದ
ತಮ್ಮ ರಾಜಕೀಯ ಜೀವನದಲ್ಲಿ ಈ ಭಾಗದ ಅಭಿವೃದ್ಧಿಗೆ ಯಾವುದೇ ಯೋಜನೆ ಮಾಡದೆ, ಈಗ ಕೇಂದ್ರ ಸಚಿವರಾದ ನಂತರ ಒಂದೆರಡು ಕಟ್ಟಡ ಕಟ್ಟಿ, ಒಂದೆರಡು ರೈಲು ಓಡಿಸಿದ ಮಾತ್ರಕ್ಕೆ ನನ್ನ ಕೆಲಸಕ್ಕೆ ಕೂಲಿ ಕೊಡಿ ಎಂದು ಪ್ರಚಾರಕ್ಕೆ ಇಳಿದಿದ್ದಾರೆ. ಇದು ಅವರ ಹತಾಶೆಯನ್ನು ವ್ಯಕ್ತಪಡಿಸುತ್ತದೆ ಎಂದರು. ಹೈದ್ರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿಯಲು ಧರಂ ಸಿಂಗ್, ಖರ್ಗೆಯವರು ನೇರ ಹೊಣೆಗಾರರು ಎಂದು ದೂರಿದರು.
ಈ ಭಾಗದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದಿದ್ದರೆ ಕುರಕುಂಟಾದ ಸಿಮೆಂಟ್ ಕಾರ್ಖಾನೆ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದರು. ಜೆಪಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರಿಗೆ ನ್ಯಾಯಾಲಯದ ತೀರ್ಮಾನದಂತೆ ಬರಬೇಕಾದ 32 ಕೋಟಿ ರುಪಾಯಿಗಳನ್ನು ಕೊಡಿಸುವಲ್ಲಿ ಕೇಂದ್ರ ಕಾರ್ಮಿಕ ಸಚಿವರಾಗಿ ವಿಫಲರಾಗಿದ್ದಾರೆ ಎಂದರು. ದೇಶದಾದ್ಯಂತ ನಮೋ ಗಾಳಿಯಿದ್ದು, ರೇವುನಾಯಕ ಬೆಳಮಗಿ ಸರಳವಾಗಿ ಗೆಲವು ಸಾಧಿಸುತ್ತಾರೆಂದು ವಿಶ್ವಾಸ ವ್ಯಕ್ತ ಪಡಿಸಿದ ಅವರು, 45 ವರ್ಷಗಳಿಂದ ಈ ಭಾಗದ ಅಭಿವೃದ್ಧಿ ಕೆಲಸ ಮಾಡದ ಧರಂ ಸಿಂಗ್, ಖರ್ಗೆಯವರಿಗೆ ಜನ ಯಾವುದೆ ಕೂಲಿ ಕೊಡುವುದಿಲ್ಲ ಎಂದರು.
ನಗರ ಬಿಜೆಪಿ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ್, ಜಿಲ್ಲಾ ಮುಖಂಡ ಬಸವರಾಜ ಮದ್ರಕಿ, ಹಿರಿಯ ಮುಖಂಡ ಕನಕಪ್ಪ ದಂಡಗುಲಕರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement