ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬುದ್ಧ, ಬಸವ ದಾರಿಯಲ್ಲಿ ಮುನ್ನಡೆಯಿರಿ

Mainashree
Updated On : 4 Apr 2014, 10:47 am

ಶಹಾಪುರ: ಭಾರತ ದೇಶದ ಪ್ರತಿಯೊಬ್ಬ ಪ್ರಜೆ ಸಾಮಾಜಿಕ ನ್ಯಾಯ ತತ್ತ್ವದಡಿ ನಡೆಯುವಂತಾಗಲು ಮಹಾಪುರುಷರಾದ ಬುದ್ಧ, ಬಸವ, ಅಂಬೇಡ್ಕರ ಅವರು ತೋರಿದ ಹಾದಿಯೇ ಸೂಕ್ತ ಎಂದು ಉಪ ಅಂಚೆ ನಿರೀಕ್ಷಕ ಸಿ.ಜಿ.ಕಾಂಬಳೆ ತಿಳಿಸಿದರು.
  ಪಟ್ಟಣದ ಶಂಕ್ರಪ್ಪ ದೊಡ್ಡಮನಿ ಅವರ ಮನೆಯಲ್ಲಿ ಏರ್ಪಡಿಸಿದ್ದ ವಚನ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ , ಬಸವ, ಬುದ,್ಧ ಅಂಬೇಡ್ಕರರು ನಡೆದ ಹಾದಿ ಅತ್ಯಂತ ಸಂಪದ್ಭರಿತವಾದ ದಾರಿಯಾಗಿದೆ. ವಚನಗಳು ನಮ್ಮ ಬದುಕಿನ ಕತ್ತಲೆಯನ್ನು ಕಳೆದು ಜ್ಯೋತಿಯನ್ನು ಹಚ್ಚುವ ಶಕ್ತಿಯನ್ನು ಹೊಂದಿವೆ. ಎಲ್ಲಾ ಮತ ಧರ್ಮಗಳನ್ನು ಮೀರಿ ಬಸವಾದಿ ಶರಣರು ಮನುಕುಲವನ್ನು ಕಟ್ಟಿದರು ಎಂದು ಹೇಳಿದರು.
ವಂಚಿಸುತ್ತ ಬಂದಿದ್ದಾರೆ:ಮತ್ತೊಬ್ಬ ಅತಿಥಿ ಶಿವಣ್ಣ ಇಜೇರಿ ಮಾತನಾಡಿ, ಯಾರಿಗೆ ಅರಿವಿಲ್ಲವೊ, ಅವರನ್ನು ದಿಕ್ಕುತಪ್ಪಿಸುವ ಜನಗಳು ನಮ್ಮ ಸುತ್ತಮುತ್ತಲೂ ಇದ್ದಾರೆ. ಅವರೆಲ್ಲ ವೇದ,ಶಾಸ್ತ್ರಗಳ ಹೆಸರಿನ ಮೇಲೆ ನಮಗೆ ತಿಳಿಯದೆ ಇರುವ ಭಾಷೆಯಲ್ಲಿ ಮಾತಾಡಿ ನಮ್ಮನ್ನೆಲ್ಲ ವಂಚಿಸುತ್ತ ನಡೆದಿದ್ದಾರೆ. ಇದನ್ನೇ ಭಾರತದ ಆಧ್ಯಾತ್ಮ ಶಕ್ತಿಯೆಂದು ಬಣ್ಣಿಸುತ್ತಾರೆಂದು ವ್ಯಂಗ್ಯವಾಡಿದರು.
ಮನು ನಮ್ಮೊಳಗೆಲ್ಲ ವ್ಯಾಪಿಸಿಕೊಂಡಿದ್ದಾನೆ: ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸವ ಮಾರ್ಗ ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಕಲ್ಲು ಕಟ್ಟಿಗೆ ಮಣ್ಣು ನೀರಿನಲ್ಲಿ ದೇವರಿದ್ದಾನೆಂದು ಜನ ಮಾನಸವನ್ನು ನಂಬಿಸಿದ ಜನಗಳು ಅವುಗಳ ಹೆಸರಿನ ಮೇಲೆ ನಮಗೆ ಗೊತ್ತಿಲ್ಲದಂತೆ ನಮ್ಮ ಮನಸ್ಸುಗಳನ್ನು ಆಕ್ರಮಿಸಿಕೊಂಡಿದ್ದಾರೆ. ನಾವು ಮೇಲ್ನೋಟಕ್ಕೆ ಮನುವಾದವನ್ನು ವಿರೋಧಿಸುವವರಾಗಿದ್ದರೂ ನಮಗೆ ಗೊತ್ತಿಲ್ಲದಂತೆ ಮನು ನಮ್ಮೊಳಗೆಲ್ಲ ವ್ಯಾಪಿಸಿಕೊಂಡಿದ್ದಾನೆ ಎಂದರು.
  ವೆಂಕಟಗಿರಿ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಪ್ರಧಾನಿ ತೋಟದ, ಬಾಪುಗೌಡ ಇಬ್ರಾಹಿಂಪುರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement