ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Mainashree
Updated On : 4 Apr 2014, 10:48 am

ವಿದ್ಯಾರ್ಥಿಗಳಿಗೆ ಎನ್ನೆಸ್ಸೆಸ್ ಉತ್ತಮ ವೇದಿಕೆ: ಗಂವಾರ
ಸುರಪುರ:ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ಎನ್ನುವ ಗಾದೆ ಮಾತಿನಂತೆ ರಾಷ್ಟ್ರೀಯ ಸೇವಾ ಯೋಜನೆಯು ಶಿಬಿರಾರ್ಥಿಗಳಿಗೆ ಸ್ವಯಂ ಉದ್ಯೋಗದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವ ಮೂಲಕ ಮಾನವ ಸಂಪನ್ಮೂಲ ಸೃಷ್ಚಿಗೆ ಉತ್ತಮ ವೇದಿಕೆಯಾಗಿದೆ ಎಂದು ಗುಲ್ಬರ್ಗ ಎಂಎಸ್‌ಐ ಕಾಲೇಜಿನ ಉಪನ್ಯಾಸಕ ಮಹೇಶ ಗಂವಾರ ಹೇಳಿದ್ದಾರೆ. ಶ್ರೀಪ್ರಭು ಕಾಲೇಜಿನಲ್ಲಿ ನಡೆದ ಎನ್ನೆಸ್ಸೆಸ್ ವಾರ್ಷಿಕ ಶಿಬಿರದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅವಶ್ಯಕತೆ ಬಗ್ಗೆ ಉಪನ್ಯಾಸ ನೀಡಿದ ಅವರು, ಎನ್ನೆಸ್ಸೆಸ್ ಶಿಬಿರ ವಿದ್ಯಾರ್ಥಿಗಳಿಗೆ ದುಡಿಮೆ ಮತ್ತು ಬದುಕುವ ರೀತಿ-ನೀತಿಗಳನ್ನು ಕಲಿಸುತ್ತದೆ ಎಂದರು. ಇಂದು ಗುಲ್ಬರ್ಗ ವಿಭಾಗದಲ್ಲಿ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳುತ್ತಿದ್ದಾರೆ. ಶಿಬಿರಾರ್ಥಿಗಳಿಗೆ ಸಮಾಜದ ಸಮಸ್ಯೆಗಳ ಮಾಹಿತಿ ನೀಡುವುದು, ಅವುಗಳಿಗೆ ಪರಿಹಾರ ತಿಳಿಸುವ ಮತ್ತು ವಿವೇಚನೆಗೆ ಒಳಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
7 ದಿನಗಳಲ್ಲಿ 200 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ: ಹಿಂದಿ ಪ್ರಾಧ್ಯಾಪಕ ಡಾ.ಪ್ರೇಮಚಂದ ಚವಾಣ ಮಾತನಾಡಿ, ಎನ್ನೆಸ್ಸೆಸ್ ಶಿಬಿರಾರ್ಥಿಗಳಲ್ಲಿ ಧೈರ್ಯ, ಶಿಸ್ತು, ಸಮಯ ಪ್ರಜ್ಞೆ, ಆತ್ಮವಿಶ್ವಾಸ, ನಾಯಕತ್ವದ ಗುಣ, ಚಾರಿತ್ರ್ಯ ನಿರ್ಮಾಣ ಮುಂತಾದವುಗಳನ್ನು ಬೆಳೆಸುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಭೂಪಾಲ ವಿಶ್ವವಿದ್ಯಾಲಯದಲ್ಲಿ 7 ದಿನಗಳಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಎನ್ನೆಸ್ಸೆಸ್ ಶಿಬಿರಾರ್ಥಿಗಳು ಕೆರೆಯನ್ನು ನಿರ್ಮಾಣ ಮಾಡಿರುವುದನ್ನು ಸ್ಮರಿಸಿದರು. ಎಸ್‌ಪಿ ಕಾಲೇಜಿನ ಉಪನ್ಯಾಸಕ ಎನ್.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಕಾಳಪ್ಪ ಶಾಬಾದಿ, ಶರಣು ನಾಯಕ, ರಜಾಕ್ ಬಾಗವಾನ್, ಸಂದೀಪ ನಾಯಕ, ಧರ್ಮರಾಜ ಪಿಳಬಂಟೆ, ದೈಹಿಕ ನಿರ್ದೇಶಕ ರಮೇಶ ಶಹಪೂರಕರ್ ಇದ್ದರು.
ನಾಳೆ ಸಿಎಂ ಆಗಮನ
ಶಹಾಪುರ: ಶಹಾಪುರದ ಪಟ್ಟಣದ ಕೆಇಬಿ ಎದುರುಗಡೆಯ ಆವರಣದಲ್ಲಿ ಏ.5ರಂದು ನಡೆಯುವ ರಾಯಚೂರು ಲೋಕಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಪರ ಪ್ರಚಾರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದು, ಕಾಂಗ್ರೆಸ್ ಹಿರಿಯ ನಾಯಕರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ತಿಳಿಸಿದ್ದಾರೆ.  ಪರಮೇಶ್ವರ, ಖರ್ಗೆ, ಇಬ್ರಾಹಿಂ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಪಾಲ್ಗೊಳ್ಳಲಿದ್ದು, ಅಂದು ನಿರೀಕ್ಷೆಗೂ ಮೀರಿ ಕಾರ್ಯಕರ್ತರು, ಸಾರ್ವಜನಿಕರು, ಪಾಲ್ಗೊಳ್ಳಲು ತಿಳಿಸಿದ್ದಾರೆ.
ಬಿಜೆಪಿಗೆ ನೇಮಕ
ಯಾದಗಿರಿ: ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ಅಕ್ಕಮಹಾದೇವಿ ಶರಣಪ್ಪ ಮಾಡ್ಯಾಳ ಅವರನ್ನು ನೇಮಕ ಮಾಡಲಾಗಿದೆಂದು ಅಧ್ಯಕ್ಷೆ ಎನ್. ಶ್ರೀದೇವಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement