ಪರೀಕ್ಷೆ; ಸಾಧನೆ
ಯಾದಗಿರಿ: ಗುಲ್ಬರ್ಗ ವಿಶ್ವವಿದ್ಯಾಲಯದ ಬಿಎ ಪ್ರಥಮ ಸೆಮಿಸ್ಟರ್ ಪರೀಕ್ಷೆಯಲ್ಲಿ ನಗರದ ಲಿಂಗೇರಿ ಕೋನಪ್ಪ ಎಜ್ಯುಕೇಶನ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಶೇ. 95 ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ ಎಂದು ಪ್ರಾಂಶುಪಾಲ ರಘುನಾಥರಡ್ಡಿ ತಿಳಿಸಿದ್ದಾರೆ.
ಬಿಎ ಪ್ರಥಮ ಸೆಮಿಸ್ಟರ್ ಶೇ. 95, ತೃತೀಯ ಸೆಮಿಸ್ಟರ್ನಲ್ಲಿ 94.25, ಐದನೇ ಸೆಮಿಸ್ಟರ್ನಲ್ಲಿ ಶೇ. 98ರಷ್ಟು ಫಲಿತಾಂಶ ಬಂದಿದೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರು, ಕಾಲೇಜು ಸಿಬ್ಬಂದಿ, ಆಡಳಿತ ಮಂಡಳಿ, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.