ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಿಜೆಪಿ ಪ್ರಚಾರಕ್ಕೆ ಡಿಜಿಟಲ್ ಸ್ಕ್ರೀನ್

Rashmi Kasaragodu
Updated On : 7 Apr 2014, 11:30 am

ಶಹಾಬಾದ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಪರ ಪ್ರಚಾರಕ್ಕಾಗಿ, ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಚುನಾವಣಾ ಪ್ರಚಾರದ ಕುರಿತ ಭಾಷಣದ ತುಣುಕಿನ ಪ್ರಚಾರಕ್ಕಾಗಿ ಬಂದ ಡಿಜಿಟಲ್ ಸ್ಕ್ರೀನ್ನ ಸಂಚಾರಿ ವಾಹನವನ್ನು ಉದ್ಯಮಿ ನರೇಂದ್ರ ವರ್ಮಾ ಉದ್ಘಾಟಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ ಮಾತನಾಡಿ, ಈ ಭಾರಿ ದೇಶದಲ್ಲಿ ಮೋದಿ ಅಲೆ ಎದ್ದಿದ್ದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಿದಲ್ಲಿ ಬರಲಿದೆ. ದೇಶವನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡಲು ನಮೋ ಅವರಿಗೆ ಬೆಂಬಲಿಸಲು ರೇವುನಾಯಕ ಬೆಳಮಗಿ ಗೆಲವು ಅವಶ್ಯ ಎಂದರು.
ನಂತರ ನಗರದ ಪ್ರಮುಖ ಸ್ಥಳಗಳಲ್ಲಿ ಡಿಜಿಟಲ್ ಸ್ಕ್ರೀನ್ ಮೂಲಕ ನಮೋ ಭಾಷಣದ ಝಲಕ್ ಪ್ರಸಾರ ಮಾಡಲಾಯಿತು. ಕಾರ್ಯದರ್ಶಿ ನಾಗಣ್ಣ ರಾಂಪುರೆ, ಶರಣು ವಸ್ತ್ರದ, ರಾಮು ಕುಸಾಳೆ, ಅರುಣ ಓಝಾ, ಸೂರ್ಯಕಾಂತ ದೋಣಿ, ಶ್ರೀಧರ ಜೋಶಿ ಇತರರು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement