ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮತದಾನ ಜಾಗೃತಿಗಾಗಿ ಬೀದಿ ನಾಟಕ, ಗೀತೆ

Rashmi Kasaragodu
Updated On : 7 Apr 2014, 11:32 am

ಯಾದಗಿರಿ: ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ವಾರ್ತಾ ಇಲಾಖೆ ಜಾನಪದ ಸಂಗೀತ, ಬೀದಿ ನಾಟಕ ಹಾಗೂ ಮತದಾರರ ಜಾಗೃತಿ ಗೀತೆಗಳನ್ನು ಹಮ್ಮಿಕೊಂಡಿತು.್ತ ಶನಿವಾರ ಜಿಲ್ಲಾ ಚುನಾವಣಾಧಿಕಾರಿ ಎಫ್.ಆರ್. ಜಮಾದಾರ್ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬೀದಿ ನಾಟಕ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಮತದಾರರಿಗೆ ಅರಿವು ಮೂಡಿಸುವಲ್ಲಿ ಬೀದಿ ನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನ್ಕರ್, ಎಂಸಿಎಂಸಿ ಸಮಿತಿಯ ನೋಡಲ್ ಅಧಿಕಾರಿ ಬಂಡಪ್ಪ ಆಕಳ, ಜಿಪಂ ಎನ್ಆರ್ಡಿಎಂಎಸ್ ಯೋಜನಾಧಿಕಾರಿ ಸಿದ್ದಾರೆಡ್ಡಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ್ ನದಾಫ್ ಸೇರಿದಂತೆ ವಾರ್ತಾ ಇಲಾಖೆ ಸಿಬ್ಬಂದಿ, ಪ್ರಕೃತಿ ಕಲಾತಂಡ ಹುಣಸಿಗಿಯ 10 ಕಲಾವಿದರು ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲೆಯ 40 ಗ್ರಾಮಗಳಲ್ಲಿ ಪ್ರತಿದಿನ ನಾಲ್ಕು ಪ್ರದರ್ಶನದಂತೆ ಏ. 5ರಿಂದ 14ರವರೆಗೆ ಮತದಾನ ಜಾಗೃತಿ ಗೀತೆಗಳು, ಬೀದಿ ನಾಟಕ ಹಾಗೂ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಯಾದಗಿರಿ ತಾಲೂಕಿನ ಅನಪೂರ, ಅಜಲಾಪೂರ, ಮಿನಾಸಪೂರ, ಕೊಂಕಲ್, ಚಿನ್ನಾಕಾರ್, ಕಂದಕೂರ, ಪಸೂಲ್, ಅರಕೇರಾ (ಕೆ), ಎಲ್ಲೇರಿ, ಕಾಳಬೆಳಗುಂದಿ, ಬಳಿಚಕ್ರ, ಮುಂಡ್ರಿಕಿ, ಬಂದಳ್ಳಿ, ಹತ್ತಿಕುಣಿ, ಠಾಣಗುಂದಿ, ಮುದ್ನಾಳ, ಶಹಾಪೂರು ತಾಲೂಕಿನ ಗುಲಸರಂ, ಹಾಲಗೇರಾ, ಉಳ್ಳೆಸೂಗೂರ, ಕುರುಕುಂದ, ಖಾನಾಪೂರ, ಟಿ. ವಡಿಗೇರಾ, ತಡಬಿಡಿ, ದೋರನಳ್ಳಿ, ಮುಡಬೂಳ, ಮದ್ರಕಿ, ಹೋತಪೇಠ, ಗೋಗಿ, ಮತ್ತು ಸುರಪೂರು ತಾಲೂಕಿನ ಎವೂರ್, ಮಲ್ಲಾ ಬಿ, ಪರಸನಳ್ಳಿ, ಕರಡಕಲ್, ಕೆಂಭಾವಿ, ಅಗ್ನಿ, ಅರಕೇರಾ (ಜೆ), ಕೋಳಿಹಾಳ, ಕಾಮನಟೆಗಿ, ಕಕ್ಕೇರಾ, ತಿಂಥಣಿ ಮತ್ತು ದೇವಾಪುರಗಳಲ್ಲಿ ಮತದಾನ ಜಾಗೃತಿ ಬಗ್ಗೆ ಈ ಕಾರ್ಯಕ್ರಮ ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement