ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸಲು ಮನವಿ

Rashmi Kasaragodu
Updated On : 7 Apr 2014, 11:32 am

ಗುರುಮಠಕಲ್: ಮತಕ್ಷೇತ್ರದ ಗಂಗಾಮತ ಕೋಲಿ ಸಮಾಜದ ಪ್ರತಿಯೊಬ್ಬರು ಗುಲ್ಬರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಬಲಿಸುವಂತೆ ಮತಕ್ಷೇತ್ರದಲ್ಲಿ ಸಮಾಜದ ಅಧ್ಯಕ್ಷರಾದ ಚುಕ್ಕಪ್ಪ ನಾಯಕ ಅವರು ತಿಳಿಸಿದ್ದಾರೆ.
ಖರ್ಗೆಯವರು ಹಿಂದುಳಿದ ಹೈ-ಕ ಪ್ರದೇಶ ಅಭಿವೃದ್ಧಿಗಾಗಿ ಶ್ರಮಿಸಿದ್ದು ಈ ಭಾಗದ ಯುವಕರ ಶೈಕ್ಷಣಿಕ ಅಭಿವೃದ್ಧಿಗಾಗಿ ಕಲಂ 371 (ಜೆ) ತಿದ್ದುಪಡಿ ಮಾಡಿ ಅಗಾಧ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಅದರಂತೆ ಎಸ್ಟಿಗೆ ಸೇರ್ಪಡೆ ಮಾಡುವ, ಸಮಾಜದ ಬಹು ದಿನಗಳ ಬೇಡಿಕೆ ವಿಚಾರದಲ್ಲಿಯೂ ಸಹ ಖರ್ಗೆಯವರು ಸಂಪೂರ್ಣ ಬೆಂಬಲ ಸೂಚಿಸಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸಲು ಶ್ರಮಿಸುತ್ತಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆಯಾಗಬೇಕಾದರೆ ಖರ್ಗೆಯವರು ಮತ್ತೊಮ್ಮೆ ಈ ಭಾಗದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುವುದು ಅವಶ್ಯಕ.
ಈ ಹಿನ್ನೆಲ್ಲೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಅವರಿಗೆ ಬೆಂಬಲ ಸೂಚಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement