ಹಕ್ಕು ಚಲಾಯಿಸಿ, ಪ್ರಗತಿಗೆ ಸಹಕರಿಸಿ
ಹುಣಸಗಿ: ಜಗತ್ತಿನಲ್ಲಿ ಅತಿದೊಡ್ಡ ಪ್ರಜಾಸತ್ತೆ ನಮ್ಮ ದೇಶವಾಗಿದೆ. ಆದ್ದರಿಂದ ಹದಿನೆಂಟು ವಯಸ್ಸಿನ ಎಲ್ಲ ಮತದಾರರು ಮತದಾನ ಮಾಡಿ ದೇಶ ಪ್ರಗತಿಗೆ ಸಹಕರಿಸಿ ಎಂದು ಪಿಡಿಓ ಶಿವಕುಮಾರ ಚೌದ್ರಿ ಹೇಳಿದರು.
ಸಮೀಪದ ವಜ್ಜಲ್ ಗ್ರಾಮ ಪಂಚಾಯತಿಯಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 18 ವಯಸ್ಸು ತುಂಬಿದ ಎಲ್ಲ ಮತದಾರರು ನಿಮ್ಮ ನಡೆ ಮತಗಟ್ಟೆ ಕಡೆ ಎಂಬ ಧ್ಯೇಯದೊಂದಿಗೆ ಮತಗಟ್ಟಗೆ ಆಗಮಿಸಿ ಮತ ಚಲಾಯಿಸಿ ಎಂದು ಜನರಿಗೆ ತಿಳಿವಳಿಕೆ ನೀಡಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಪೂರ್ಣವಾಗುವುದಕ್ಕೆ ಜನತೆಯ ಸಹಭಾಗಿತ್ವ ಮಹತ್ವದ್ದಾಗಿದೆ ಎಂದು ಹೇಳಿದರು. ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ತಮ್ಮ ಪರವಾಗಿ ಸಂಸತ್ತಿನಲ್ಲಿ ಶಾಸನ ರಚನೆಯ ಪ್ರಮುಖ ಕರ್ತವ್ಯ ನಿರ್ವಹಿಸುವ ಪ್ರತಿನಿಧಿಯನ್ನು ಆಯ್ಕೆ ಮಾಡಲು ನಿರ್ಭೀತಿಯಿಂದ ಮತ ಚಲಾಯಿಸಿ ಎಂದರು.