ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೆದ್ದಾರಿಯಲ್ಲಿರುವ ಟಿಸಿ ತೆರವಿಗೆ ಆಗ್ರಹ

Rashmi Kasaragodu
Updated On : 7 Apr 2014, 11:33 am

ಶಹಾಪುರ: ಬೀದರ್ ಬೆಂಗಳೂರು ಮುಖ್ಯ ಹೈವೆ ರಸ್ತೆಗೆ ಹೊಂದಿಕೊಂಡಂತೆ ಬುದ್ಧ ನಗರದ ಸಮೀಪ ವಿದ್ಯುತ್ ಪರಿವರ್ತಕ ಇದ್ದು, ಅದಕ್ಕೆ ಸುರಕ್ಷತೆ ಇಲ್ಲದೆ ತೊಂದರೆಗೆ ಕಾರಣವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಜೆಸ್ಕಾಂ ವಿರುದ್ಧ ಆರೋಪ ವ್ಯಕ್ತಪಡಿಸಿದ್ದಾರೆ. ಹೈವೇ ರಸ್ತೆಯಲ್ಲಿ ಸಾರ್ವಜನಿಕರಿಗೆ ತಿರುಗಾಡಲು ಸ್ಥಳಾವಕಾಶವಿಲ್ಲದಂತೆ ವಿದ್ಯುತ್ ಪರಿವರ್ತಕಗಳು ಅಳವಡಿಸಿದ್ದು, ಚಿಕ್ಕ ಮಕ್ಕಳು, ಅಲ್ಲಿಯೇ ಓಡಾಡಿಕೊಂಡಿರುತ್ತಾರೆ. ಇದು ಆತಂಕಕ್ಕೆ ಕಾರಣವಾಗಿದೆ. ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಓಡಾಡುತ್ತಿದ್ದು ರಸ್ತೆ ಬದಿಗಿರುವ ವಿದ್ಯುತ್ ಪರಿವರ್ತಕ ತಾಗಿದರೂ ಅನಾಹುತ ತಪ್ಪಿದ್ದಲ್ಲ. ತಕ್ಷಣವೇ ಈ ಕುರಿತು ಜೆಸ್ಕಾಂ ಅಧಿಕಾರಿಗಳು ಕಾಳಜಿ ವಹಿಸಿ ಸುರಕ್ಷತೆ ಜಾಗಕ್ಕೆ ವಿದ್ಯುತ್ ಪರಿವರ್ತಕ ಅಳವಡಿಸಬೇಕೆಂಬುದು ಆಗ್ರಹಿಸಿದ್ದಾರೆ.
ಪೊಲೀಸರ ವಶಕ್ಕೆ
ಉಸುಕಿನ ವಾಹನ
ಸುರಪುರ: ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿ, ಟಿಪ್ಪರ್, ಟ್ರಾಕ್ಟರ್ ವಾಹನಗಳನ್ನು ಡಿಸಿಬಿಐ ಪೊಲೀಸರು ವಶಪಡಿಸಿಕೊಂಡಿದ್ದಾರೆ.  ತಾಲೂಕಿನ ಹೆಮನೂರು, ಚೌಡೇಶ್ವರಹಾಳ ಹಾಗೂ ಬಂಡೊಳ್ಳಿ ಕ್ರಾಸ್ ಬಳಿಯಿಂದ ಈ ವಾಹನಗಳಲ್ಲಿ ಮರಳನ್ನು ಕಳ್ಳತನದಿಂದ ಸಾಗಿಸಲಾಗುತ್ತಿತ್ತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಡಿಸಿಬಿಐ ಪೊಲೀಸ್ ಅಧಿಕಾರಿ ಏಗೇನಗೌಡ, ಸಿಬ್ಬಂದಿಗಳಾದ ನಾಗಪ್ಪ, ಚಂದ್ರಪ್ಪ ಇನ್ನಿತರರು ವಾಹನಗಳನ್ನು ಜಪ್ತಿ ಮಾಡಿ ಸುರಪುರ ಪೊಲೀಸ್ ಠಾಣೆಗೆ ಒಪ್ಪಿಸಿದರು.
ಬೆಂಕಿ: 1.5 ಲಕ್ಷ ರು. ಮೌಲ್ಯದ ಹತ್ತಿ ನಾಶ
ಕೆಂಭಾವಿ: ಸಮೀಪದ ನಗನೂರ ಗ್ರಾಮದ ಹಣಮಂತ್ರಾಯ ಬಸಣ್ಣ ಬುದೂರ ಎಂಬುವರ ಹೊಲದಲ್ಲಿ ಶನಿವಾರ  ರಾತ್ರಿ ಆಕಸ್ಮಿಕ ಬೆಂಕಿ ತಗುಲಿ 25 ಕ್ವಿಂಟಲ್ ಹತ್ತಿ ಸುಟ್ಟು ಕರಕಲಾಗಿದೆ. ಸುಮಾರು 1.50 ಲಕ್ಷ ರೂ.ಗಳಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಸ್ಥಳಕ್ಕೆ ಗ್ರಾಮ ಲೆಕ್ಕಿಗ ಬಸವರಾಜ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.
ಬಾಬೂಜಿ ಜನ್ಮದಿನ
ಯಾದಗಿರಿ: ದೇಶ ಕಂಡ ಮಹಾನ್ ವ್ಯಕ್ತಿ ಬಾಬು ಜಗಜೀವನರಾಮ್ ಎಂದು ಮಾದಿಗ ಮಿಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಬಣ್ಣ ಆರೋಲಿಕರ್ ಹೇಳಿದರು. ನಗರದ ಚರ್ಚ ಹಾಲ್ನಲ್ಲಿ   ಏರ್ಪಡಿಸಿದ್ದ ಬಾಬು ಜಗಜೀವನರಾಮ್ 107ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement