ಖರ್ಗೆಗೆ ದಲಿತ ಜನಜಾಗೃತಿ ವೇದಿಕೆ ಬೆಂಬಲ
ಗುಲ್ಬರ್ಗ: ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್‌ಐ ಆಸ್ಪತ್ರೆ, 371(ಜೆ) ತಿದ್ದುಪಡಿ, ರೇಲ್ವೆ ವಿಭಾಗೀಯ ಕೇಂದ್ರ ಯಾದಗಿರಿ, ಬುದ್ಧ ವಿಹಾರ ಹೀಗೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ಕರ್ನಾಟಕ ದಲಿತ ಜನಜಾಗೃತಿ ವೇದಿಕೆ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ವಿಜಯಕಾಂತ ರಾಗಿ, ಖಜಾಂಚಿ ಭೀಮರಾವ್ ಸೂಗೂರ, ಸಂಚಾಲಕ ಮಹಾದೇವ ಬಿ.ಶರ್ಮಾ ಮುಂತಾದವರು ಬೆಂಬಲ ವ್ಯಕ್ತಪಡಿಸುವರೆಂದು ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ. ಶರ್ಮ ತಿಳಿಸಿದ್ದಾರೆ.