ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಖರ ಬಿಸಿಲಲ್ಲೂ ಬಿರುಸಿನ ಪ್ರಚಾರ

Rashmi Kasaragodu
Updated On : 9 Apr 2014, 10:52 am

ಶಹಾಪುರ: ದೇಶ ಸ್ವಾಭಿಮಾನಿ ಮತ್ತು ಸಶಕ್ತವಾಗಲು ಬಿಜೆಪಿ ಬೆಂಬಲಿಸಿ ಆಶೀರ್ವದಿಸಬೇಕು ಎಂದು ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ ತಿಳಿಸಿದರು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿಯವರನ್ನು ಪ್ರಧಾನಿಯನ್ನಾಗಿಸಿ ನೋಡಲು ಜನತೆ ಇಚ್ಛಿಸಿದ್ದು, ಅದು ಸಾಕಾರವಾಗಲಿದೆ. ಜನತೆಯ ಆಶೋತ್ತರಗಳಿಗೆ ಬಿಜೆಪಿ ಸ್ಪಂದಿಸುತ್ತದೆ ಎಂದು ತಿಳಿಸಿದರು. ಗುರು ಕಾಮಾ, ಮಂಜುನಾಥ ಗಂಗಾಧರಮಠ, ಚಂದ್ರುಯಾಳಗಿ, ಶಂಕರ ಕೊನೇರ, ದೇವಿಂದ್ರ ಕೊನೇರ, ಜ್ಞಾನೇಶ್ವರ, ಈರಗಪ್ಪ ಹೋತಪೇಟೆ, ವೆಂಕಟೇಶ ಆಲೂರ, ಜಟ್ಟೆಪ್ಪ ಕೆಂಭಾವಿ, ಬಸವರಾಜ, ತಿರುಪತಿ ಇದ್ದರು.
ಗುರುಮಠಕಲ್‌ನಲ್ಲಿ..: ಬಿಜೆಪಿ ಕಾರ್ಯಕರ್ತರು ಗ್ರಾಮ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಕಾಕಲವಾರ್, ಪುಟಪಾಕ, ಕೇಶ್ವಾರ್, ದಂತಪೂರ್, ಧರ್ಮಪೂರ್ ಮುಂತಾದ ತಾಂಡಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುವ ಮೂಲಕ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಬ್ಲಾಕ್ ಬಿಜೆಪಿ ಅಧ್ಯಕ್ಷ ಕೆ.ದೇವದಾಸ್, ಹಿರಿಯ ಮುಖಂಡ ಮಲ್ಲೇಶಪ್ಪ ಬೇಲಿ, ವೆಂಕಟಪ್ಪ ಮನ್ನೆ, ವಿಶ್ವನಾಥ ಗೊಲ್ಲ, ರಾಜೇಶ್ವರರೆಡ್ಡಿ, ಶ್ರೀಧರರೆಡ್ಡಿ, ಶರಣು ಗಾಜರಕೋಟ್ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement