ಪ್ರತಿಯೊಂದು ಮತವೂ ಅಮೂಲ್ಯ: ಸ್ವೀಪ್ ವೀಕ್ಷಕ ರಾಜೀವ್
ಚಿತ್ತಾಪುರ: ಚುನಾವಣೆಯಲ್ಲಿ ಸುಭದ್ರ, ಭ್ರಷ್ಟಾಚಾರ ರಹಿತ, ಮತ್ತು ಯೋಗ್ಯ ಪ್ರತಿನಿಧಿ ಚುನಾಯಿಸಲು ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಿದಲ್ಲಿ ತಮ್ಮ ಇಚ್ಛೆಯ ಜನಪ್ರತಿನಿಧಿ ಚುನಾಯಿಸಲು ಸಾಧ್ಯ ಎಂದು ಸ್ವೀಪ್ ವೀಕ್ಷಕ ರಾಜೀವ ಜೈನ್ ಹೇಳಿದರು. ಪಟ್ಟಣದ ಭುವನೇಶ್ವರ ಚೌಕ್ ಹತ್ತಿರ ಪುರಸಭೆ, ಶಿಕ್ಷಣ ಹಾಗೂ ಗಂಗಾ ಪರಮೇಶ್ವರ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಸ್ವೀಪ್ ಅಧ್ಯಕ್ಷ ಟಿಎಚ್ಎಂ ಕುಮಾರ ಮಾತನಾಡಿದರು. ಚಿತ್ತಾಪುರದ ಸಹಾಯಕ ಚುನಾವಣಾಧಿಕಾರಿ ದೊಡ್ಡಬಸವರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ರಾಧಾಕೃಷ್ಣ, ತಹಸೀಲ್ದಾರ ಗುರುನಾಥ ವೈದ್ಯ ಪಾಲ್ಗೊಂಡಿದ್ದರು. ಗಂಗಾ ಪರಮೇಶ್ವರಿ ಕಾಲೇಜಿನ ವಿದ್ಯಾರ್ಥಿಗಳು ಮತದಾನದ ಮಹತ್ವದ ಸಂದೇಶ ಸಾರುವ ಜಾನಪದ, ನೃತ್ಯ, ಭಜನೆ, ಏಕಪಾತ್ರಭಿನಯಗಳ ಮೂಲಕ ಜಾಗೃತಿ ಮೂಡಿಸಿದರು.