ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಪ್ರಜಾತಾಂತ್ರಿಕ ಕ್ರಮದಲ್ಲಿ ಪಕ್ಷಗಳು: ಮಂಜುನಾಥ್

Mainashree
Updated On : 10 Apr 2014, 11:37 am

ಗುಲ್ಬರ್ಗ: ಜನರಿಂದ ಆಯ್ಕೆಯಾಗಿ ಹೊರಹೊಮ್ಮುವವರು ರಾಷ್ಟ್ರದ ಸೂತ್ರವನ್ನು ನಡೆಸುವವರಾಗಬೇಕು. ಮೊದಲೇ ಪ್ರಧಾನಿಯನ್ನು ನಿರ್ಧರಿಸಿ ಜನತೆಗೆ ಇವರೇ ನಿಮ್ಮ ಪ್ರಧಾನಿ ಎಂದು ಅಬ್ಬರದಿಂದ ಪ್ರಚಾರ ನಡೆಸಲಾಗುತ್ತಿದೆ. ಇದು ಅಪ್ರಜಾತಾಂತ್ರಿಕ ಕ್ರಮ ಎಂದು ಸೋಷಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಸಮಿತಿಯ ಹಿರಿಯ ಸದಸ್ಯ ಡಾ. ಬಿ.ಆರ್. ಮಂಜುನಾಥ್ ಹೇಳಿದರು.
ನಗರದ ಕೇಂದ್ರ ಬಸ್‌ನಿಲ್ದಾಣದ ಎದುರುಗಡೆ ಸಂತೋಷ್ ಟಾಕೀಸ್‌ನ ಪಕ್ಕದ ಮುಖ್ಯ ರಸ್ತೆಯಲ್ಲಿ ಲೋಕಸಭಾ ಅಭ್ಯರ್ಥಿ ಎಸ್.ಎಂ. ಶರ್ಮಾ ಪರವಾಗಿ ನಡೆದ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಬಂಡವಾಳಶಾಹಿಗಳ ಪಾದ ಸೇವೆಮಾಡುವ ಜನವಿರೋಧಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಿ ಜನತೆಯೇ ಒಂದು ಹೊಸ ರಾಜಕೀಯ ಪರ್ಯಾಯವನ್ನು, ನ್ಯಾಯದ ಪರವಾದ ಹೋರಾಟದ ಪರ್ಯಾಯವನ್ನು ಹುಡಿಕಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜನತೆಯ ಆಶಾಕಿರಣವಾಗಿ ಹೊರಹೊಮ್ಮುತ್ತಿರುವ ನಮ್ಮ ಪಕ್ಷದ ಅಭ್ಯರ್ಥಿಯನ್ನು ಚುನಾಯಿಸಿ ಭ್ರಷ್ಟ, ಜನವಿರೋಧಿ ಪಕ್ಷಗಳನ್ನು ಸೋಲಿಸಬೇಕು ಎಂದು ನೆರೆದಿದ್ದ ಜನರಿಗೆ ಕರೆ ನೀಡಿದರು. ಜಿಲ್ಲಾ ಸಮಿತಿಯ ಸದಸ್ಯ ವಿ. ನಾಗಮ್ಮಾಳ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿಯ ಸದಸ್ಯ ಬಿ. ಭಗವಾನರೆಡ್ಡಿ ಮಾತನಾಡಿದರು. ವೇದಿಕೆಯ ಮೇಲೆ ಪಕ್ಷದ ಅಭ್ಯರ್ಥಿ ಎಸ್.ಎಂ. ಶರ್ಮಾ, ರಾಮಣ್ಣಾ ಇಬ್ರಾಹಿಂಪುರ್, ಗೌಸ್ ಪಟೇಲ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement