ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅರವಟ್ಟಿಗೆಗಳೇ ಬೇಸಿಗೆಯಲ್ಲಿ ಜೀವಜಲ ತಾಣಗಳು

Mainashree
Updated On : 11 Apr 2014, 11:50 am

ಶಹಾಪುರ: ಬೇಸಿಗೆ ಕಾಲ ಬಂತೆಂದರೆ ಸಾಕು ಪಟ್ಟಣದ ಜನಸಂದಣಿ ಇರುವ ಕಡೆಗಳಲ್ಲಿ ನೀರಿನ ಅರವಂಟಿಕೆಗಳು ಪ್ರಾರಂಭವಾಗುತ್ತವೆ. ಅದರಲ್ಲೂ ಈ ಹೈ.ಕ. ಬಿಸಿಲು 40ರಿಂದ 45 ರಷ್ಟು ಉಷ್ಣಾಂಶದಿಂದ ಕೂಡಿರುತ್ತದೆ.
  ಇಂತಹ ನೆತ್ತಿ ಸುಡುವ ಬಿರುಬಿಸಿಲಲ್ಲಿ ಪಶುಪಕ್ಷಿಗಳು ಸೇರಿದಂತೆ ಅನೇಕರಿಗೆ ಆಗಾಗ ಗಂಟಲು ಒಣಗುತ್ತಿರುತ್ತದೆ. ಸಾಮಾನ್ಯವಾಗಿ ಅನೇಕ ಕೈಪಂಪ್‌ಗಳ, ಕೆರೆ ಬಾವಿ, ಹಳ್ಳಗಳಲ್ಲಿನ ನೀರು ಪಾತಾಳ ಕಾಣುತ್ತವೆ. ಸಾಮಾನ್ಯವಾಗಿ ಬೇಸಿಗೆ ಹೊರತುಪಡಿಸಿ, ಉಳಿದ ಅವಧಿಯಲ್ಲಿ ನೀರನ್ನು ನಿರ್ಲಕ್ಷ್ಯದಿಂದಲೇ ಬಳಸುತ್ತಿರುತ್ತವೆ. ನೀರು ಎಷ್ಟು ಅತ್ಯಲ್ಯ ಎಂದು ಬೇಸಿಗೆ ಬಂದಾಗಲೇ ಹಲವರಿಗೆ ತಿಳಿಯುತ್ತದೆ.
ಜೀವ ಜಲ: ಅಂಗಡಿಗಳಲ್ಲಿ ನೀರು ಲಭ್ಯವಾದರೂ, ಅದಕ್ಕೆ ಹಣ ವ್ಯಯಿಸಬೇಕಾಗಿರುತ್ತದೆ. ಹೋಗಲಿ ಮನೆಗಳಲ್ಲಿ ನೀರು ಕೇಳೋಣವೆಂದರೆ, ಕಳ್ಳತನ, ದರೋಡೆ ಹಿನ್ನೆಲೆಯಲ್ಲಿ ಮನೆಗಳವರು ಬಾಗಿಲನ್ನೇ ತೆರೆಯುವುದಿಲ್ಲ.  ಹೀಗಾಗಿ ಬೇಸಿಗೆ ಬಂತೆಂದರೆ ಜಾನುವಾರುಗಳಿಗಾಗಿ ತೋಟಗಳಲ್ಲಿನ ಕುಡತಿಗಳಲ್ಲಿ, ಗುಬ್ಬಿ ಕಾಗೆ ಪಕ್ಷಿಗಳಿಗೆ ಸಣ್ಣ ಸಣ್ಣ ಹರಿವಾಣಗಳಲ್ಲಿ ನೀರು ತುಂಬಿಸಿರುತ್ತಾರೆ. ಪಶು ಪ್ರಾಣಿಗಳಿಗಾಗಿ ಮತ್ತು ಸಾಮಾನ್ಯ ಜನರ ಬಾಯಾರಿಕೆಗೆ ಪಾಲಿಗೆ ಈ ಅರವಂಟಿಕೆಗಳೇ ಅಮೃತಜಲವಾಗಿ ಬಿಡುತ್ತವೆ.
  ಮಾರ್ಚ್ ಕೊನೆಯ ವಾರದಲ್ಲಿ ಶುರುವಾಗಿ ಜೂನ್ ಮೊದಲ ವಾರದವರೆಗೆ ಈ ಭಾಗದಲ್ಲಿ ನೀರಿಗಾಗಿ  ಹೋರಾಟವೇ ಮಾಡಬೇಕಾದ ಪರಿಸ್ಥಿತಿ ಆಗಾಗ ಉಂಟಾಗುತ್ತಿರುತ್ತದೆ. ಈಗಾಗಲೇ ಎಲ್ಲೆಡೆ ನೀರಿನ ಹಾಹಾಕಾರ. ನಾನಾ ಹಳ್ಳಿಗಳು ನೀರಿನಿಂದ ನಲುಗುತ್ತಿವೆ. ಇಂತಹ ಸಂದರ್ಭದಲ್ಲಿ ಅರವಂಟಿಕೆಗಳು ಬಾಯಾರಿಕೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಬದಲಾವಣೆಯಾಗದ ಪದ್ಧತಿಗಳಲ್ಲಿ ಅರವಂಟಿಕೆಯೂ ಸಹ ಒಂದು.
 ದಾರಿಯಲ್ಲಿ ಬಾಯಾರಿದಾಗ ನೀರು ಕುಡಿಯಲೆಂದು ಮಡಕೆಯಲ್ಲಿ ನೀರು ಇಡುತ್ತಿದ್ದ ವ್ಯವಸ್ಥೆಗೆ ನೀರಿನ ಅರವಂಟಿಕೆ ಎನ್ನುತ್ತಾರೆ. ಬೇಸಿಗೆ ಆರಂಭವಾಗುವ ಮೊದಲ ತಿಂಗಳಲ್ಲಿ ಅಂಗಡಿ, ಶಾಲೆ ಮನೆಮುಂದೆ ಅರವಂಟಿಕೆಗಳು ಕಾಣಿಸಿಕೊಳ್ಳುತ್ತವೆ. ಜನದಟ್ಟಣೆ ಇರುವ ಕಡೆ ಈಗಲೂ ನೀರು ತುಂಬಿ ಇಡುವ ಪದ್ಧತಿ ಜಾರಿಯಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement