ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುಭದ್ರ ಸರ್ಕಾರ ರಚನೆಗೆ ಬಿಜೆಪಿ ಬೆಂಬಲಿಸಿ

Mainashree
Updated On : 11 Apr 2014, 11:50 am

ಕೆಂಭಾವಿ: ದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್‌ನಿಂದ ಆಯ್ಕೆಯಾದವರು ಬಡವರನ್ನು ಬಡವರಾಗಿ, ಶ್ರೀಮಂತರನ್ನು ಶ್ರೀಮಂತರಾಗಿಯೇ ಉಳಿಸಿದ್ದಾರೆ. ಇದನ್ನು ಮನಗಂಡ ಮತದಾರ ಈ ಬಾರಿ ಬಿಜೆಪಿಗೆ ಆಶೀರ್ವದಿಸಿ ಸುಭದ್ರ ಸರ್ಕಾರ ರಚನೆಗೆ ಮೋದಿ ಬೆಂಬಲಿಸಬೇಕು ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಹೇಳಿದರು.
ಪಟ್ಟಣದ ರೇವಣ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಸಮಾವೇಶದಲ್ಲಿ ಮಾತನಾಡಿ, ನರೇಂದ್ರ ಮೋದಿಯವರು  ಗುಜರಾತ್‌ನಲ್ಲಿ ಪ್ರಪಂಚದಲ್ಲೇ 535 ಕಿಲೋ ಮೀಟರ್ ಉದ್ದದ ಕಾಲುವೆ ನಿರ್ಮಿಸಿದ್ದಾರೆ. 10 ಲಕ್ಷ ಹೆಕ್ಟರ್‌ಗಿಂತಲೂ ಹೆಚ್ಚು ಪ್ರದೇಶಕ್ಕೆ ನೀರೊದಗಿಸುವ ಮೂಲಕ ರೈತರ ಬಾಳನ್ನು ಬೆಳಗಿಸಿದ ಕೆಲಸ ಮಾಡಿದ್ದಾರೆ.
ಮಾದರಿ: ಇಲ್ಲಿ ಕಾಂಗ್ರೆಸ್ ಸರ್ಕಾರ ರೈತರನ್ನು ಬಡತನದಲ್ಲಿಯೇ ಇಟ್ಟು ಸಾಲ ಮಾಡಿಸುತ್ತಿದ್ದಾರೆ. ಆದರೆ ಗುಜರಾತ್‌ನಲ್ಲಿ ರೈತರು ಪ್ರಗತಿಪರರಾಗಿ ಈಗ ಮತ್ತೊಬ್ಬರಿಗೆ ಸಾಲ ಕೊಡುವ ಸ್ಥಿತಿಯಲ್ಲಿದ್ದಾರೆ. ಅಲ್ಲದೆ ಗುಜರಾತಿನ ವಿದ್ಯುತ್ ವ್ಯವಸ್ಥೆ ದೇಶಕ್ಕೇ ಮಾದರಿಯಾಗಿದೆ. ಎಲ್ಲಾ ರಾಜ್ಯಕ್ಕೂ ಗುಜರಾತ್ ಮಾದರಿಯಾದಂತೆ, ಎಲ್ಲ ದೇಶಗಳಿಗೂ ನಮ್ಮ ದೇಶ ಮಾದರಿಯಾಗಬೇಕು. ಇದಕ್ಕಾಗಿ ಮೋದಿ ನೇತೃತ್ವದ ಸರ್ಕಾರ ಅತಿ ಅವಶ್ಯವಾಗಿದೆ ಎಂದರು.
ರಸ್ತೆ ನಿರ್ಮಾಣ: ಶಾಸಕ ಗುರು ಪಾಟೀಲ ಶಿರವಾಳ ಮಾತನಾಡಿ, ಕಾಂಗ್ರೆಸ್ ಸರ್ಕಾರ 50 ವರ್ಷದಲ್ಲಿ 40 ಸಾವಿರ ಕಿಮೀ ರಸ್ತೆ ನಿರ್ಮಿಸಿದೆ. ಆದರೆ ವಾಜಪೇಯಿಯವರು ಕೇವಲ 6 ವರ್ಷದಲ್ಲಿ 28 ಸಾವಿರ ಕಿ.ಮೀ ರಸ್ತೆ ನಿರ್ಮಿಸಿ, ಗ್ರಾಮೀಣ ಪ್ರದೇಶಗಳಿಗೆ ಸೌಕರ್ಯ ನೀಡಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಶಿವನಗೌಡ ನಾಯಕರನ್ನು ಲೋಕಸಭೆಗೆ ಕಳುಹಿಸಲು ನಾವೆಲ್ಲರೂ ಬದ್ಧರಾಗಿ ಬಿಜೆಪಿಗೇ ಮತದಾನ ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಅಮಾತೆಪ್ಪ ಕಂದಕೂರ, ಬಿಜೆಪಿ ಘಟಕದ ಜಿಲ್ಲಾ ಅಧ್ಯಕ್ಷ ವೀರನಗೌಡ ಮಲ್ಲಾಬಾದಿ, ಡಾ. ಮಲ್ಲನಗೌಡ ಉಕ್ಕಿನಾಳ, ಡಾ. ಚಂದ್ರಶೇಖರ ಸುಬೇದಾರ, ಶಂಕ್ರಣ್ಣ ವಣಕ್ಯಾಳ, ರಾಜಶೇಖರ ಗೂಗಲ್, ತಾಹೇರ ಪಾಶಾ ಖಾಜಿ, ಈಶ್ವರ ಬಡಗೇರ, ಡಾ. ರವಿ ಅಂಗಡಿ, ಯಲ್ಲಯ್ಯ ನಾಯಕ್, ಸುಧಾಕರ ಡಿಗ್ಗಾವಿ, ಬಸವರಾಜಪ್ಪಗೌಡ ಬೊಮ್ಮನಳ್ಳಿ, ಶಿವಶರಣಪ್ಪ ಸೊನ್ನದ, ದೇವಿಂದ್ರಪ್ಪ ಜಾಲಿಬೆಂಚಿ, ಬಾಗಪ್ಪ ಚಾನಕೋಟಿ, ಅಮರಪ್ಪ ಶಹಾಪುರ, ಸುಭಾಸ ಮ್ಯಾಗೇರಿ, ರಾಮಣ್ಣ ಚಿತ್ತರಗಿ, ಭೀಮನಗೌಡ ಕಾಚಾಪು  ಇದ್ದರು.  ಅನೇಕರು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಇದಕ್ಕೂ ಮೊದಲು ಯಾಳಗಿ, ಮಲ್ಲಾ, ಏವೂರ, ನಗನೂರ, ಯಕ್ತಾಪುರ ಗ್ರಾಮಗಳಲ್ಲಿ  ರೋಡ್ ಶೋ ಮೂಲಕ ಮತಯಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement