ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

20ಕ್ಕೂ ಅಧಿಕ ಕ್ಷೇತ್ರಗಳಲ್ಲಿ 'ಕೈ' ಗೆಲವು: ಪಾಟೀಲ್

Mainashree
Updated On : 12 Apr 2014, 11:21 am

ಜೇವರ್ಗಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆಯಿದ್ದು, ರಾಜ್ಯದ 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಗುಲ್ಬರ್ಗ ಕ್ಷೇತ್ರದಿಂದ ಸ್ಪರ್ಧಿಸಿದ ಖರ್ಗೆ ಗೆಲವು ಖಚಿತವೆಂದು ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕೇಂದ್ರದಲ್ಲಿನ ಯುಪಿಎ ಸರ್ಕಾರದ ಸಾಧನೆಗಳು ಮತ್ತು ಕಳೆದ 9 ತಿಂಗಳಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರು, ಹಿಂದುಳಿದವರು ಹಾಗೂ ದೀನ ದಲಿತರ ಪರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸಾಧನೆಗಳ ಆಧಾರದ ಮೇಲೆ ಪಕ್ಷದ ಹಿರಿಯ ಮುಖಂಡರು ರಾಜ್ಯಾದ್ಯಂತ ಸಂಚರಿಸಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಚಾರ ಸಭೆಗಳು: ಖರ್ಗೆ ಅವರು ಏ.13ರಂದು ತಾಲೂಕಿನಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಲಿದ್ದಾರೆ. ಅಂದು ಬೆಳಗ್ಗೆ 11ಕ್ಕೆ ಜೇರಟಗಿ, ಮಧ್ಯಾಹ್ನ 1ಕ್ಕೆ ನೆಲೋಗಿ ಹಾಗೂ ಸಂಜೆ 4ಕ್ಕೆ ಕೂಡಿ ದರ್ಗಾದಲ್ಲಿ ಆಯೋಜಿಸಿದ್ದ ಚುನಾವಣಾ ಬಹಿರಂಗ ಪ್ರಚಾರ ಸಭೆಗಳಲ್ಲಿ ಖರ್ಗೆ ಮಾತನಾಡಲಿದ್ದಾರೆ ಎಂದು ಅಲ್ಲಮಪ್ರಭು ತಿಳಿಸಿದರು.
ಶಿವಶರಣಪ್ಪ ಕೋಬಾಳ, ಸಿದ್ರಾಮಪ್ಪ ಬಿಳವಾರ್, ಅಪ್ಪಾಸಾಬ ಹೊಸ್ಮನಿ, ಬೈಲಪ್ಪ ನೆಲೋಗಿ, ಶಾಂತಗೌಡ ಮಳ್ಳಿ, ಗುರುರಾಜ್ ಸುಬೇದಾರ್, ಮರೆಪ್ಪ ಸರಡಗಿ, ಬಸವರಾಜ ದೊರೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement