ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಧ್ವನಿ ಇಲ್ಲದವರ ಪರ ಕಾಂಗ್ರೆಸ್: ಖರ್ಗೆ

Mainashree
Updated On : 12 Apr 2014, 11:20 am

ಕ.ಪ್ರ. ವಾರ್ತೆ ್ಣ ಗುಲ್ಬರ್ಗ ್ಣ ಏ.11
ಕಾಂಗ್ರೆಸ್ ಪಕ್ಷ ಯಾವಾಗಲೂ ಬಡವರಿಗಾಗಿ ಯೋಜನೆ ರೂಪಿಸಿದೆ. ಅವರು ಲಾಭ ಪಡೆದರೂ ನಮ್ಮ ಬಗ್ಗೆ ಮಾತನಾಡಲ್ಲ. ಇದನ್ನು ಸಹಿಸದೇ ಇರುವವರು ನಮ್ಮ ವಿರುದ್ಧ ಮಾತನಾಡುವುದೇ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆದು ಬಡವರ ಬಗೆಗಿನ ನಿಜವಾದ ಕಾಳಜಿ ಗೌಣವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದರು.
ಗುಲ್ಬರ್ಗದ ಹಲವು ಬಡಾವಣೆಗಳಲ್ಲಿ ಹಾಗೂ ಕಪನೂರ್ ಸೇರಿದಂತೆ ಹೊರ ವಲಯದ ಹಲವು ಗ್ರಾಮಗಳಿಗೆ  ಚುನಾವಣೆ ಪ್ರಚಾರ ನಡೆಸಿದ ಅವರು, ಉದ್ಯೋಗ ಖಾತರಿ ಯೋಜನೆ ಜಾರಿಯಾದ ಬಳಿಕ ಈಗ ಬಡ ಕೂಲಿಕಾರ್ಮಿಕರು ಪಡೆಯುತ್ತಿರುವ ಕೂಲಿ ಹೆಚ್ಚಿದೆ. ಇದು ಬಡವರಿಗಾದ ಸವಲತ್ತಲ್ಲವೆ ಎಂದರು.
ಬಂಡವಾಳಶಾಹಿಗಳ ಪರ: ಕಾಂಗ್ರೆಸ್ ಬಡವರ ಪರ ಪಕ್ಷ ಎನ್ನುವುದು ಇದರಿಂದ ಸಾಬೀತಾಗಿದ್ದು, ಎಲ್ಲರೂ ಗೌರವಯುತವಾಗಿ ಬದುಕಬೇಕು ಎನ್ನುವುದನ್ನೇ ತಮ್ಮ ಪಕ್ಷ ಪ್ರತಿಪಾದಿಸುತ್ತದೆ. ಆದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಕೇವಲ ಬಂಡವಾಳಶಾಹಿಗಳ ಪರವಾಗಿ ನಿಂತಿರುವುದು ಆರೋಗ್ಯಕರ ಸಮಾಜದ ಲಕ್ಷಣ ಅಲ್ಲ ಎಂದರು. ಪಾಲಿಕೆ ಸದಸ್ಯ ರಾಜು ಕಪನೂರ್, ದೇವಿಂದ್ರಪ್ಪ ಕಪನೂರ, ಮಹ್ಮದ್ ಅಜಗರ್ ಚುಲಬುಲ್, ಶಂಕರಸಿಂಗ್, ಪ್ರಭುಗೊಬ್ಬುರ್ ಇತರರು ಇದ್ದರು.
ಬಿಜೆಪಿ ಟೀಕೆಗೆ ಕಾಂಗ್ರೆಸ್ ತಿರುಗೇಟು: ಹೈಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ವಿಧಿ ತಿದ್ದುಪಡಿಯಲ್ಲಿ ನಮ್ಮದೂ ಪಾತ್ರವಿದೆ ಎಂದು ಈಗ ಹೇಳುತ್ತಿರುವ ಬಿಜೆಪಿ ಮುಖಂಡ ಅನಂತಕುಮಾರ್ ಈ ಹಿಂದೆ ಎಲ್.ಕೆ ಆಡ್ವಾಣಿ ಈ ಪ್ರಸ್ತಾವನೆ ತಿರಸ್ಕರಿಸಿದಾಗ ಈ ಭಾಗದ ಮೇಲೆ ಮಮತೆ ಏಕೆ ತೋರಿಸಲಿಲ್ಲ. ಕಲಂ 371 ಪ್ರಸ್ತಾವನೆ ತಿರಸ್ಕರಿಸಬೇಡಿ, ಪುರಸ್ಕರಿಸಿರಿ ಎಂದು ತಮ್ಮ ನಾಯಕರ ಮೇಲೇಕೆ ಒತ್ತಡ ಹೇರಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್, ಪಾಲಿಕೆ ಸದಸ್ಯ ಭೀಮರೆಡ್ಡಿ ಪಾಟೀಲ್ ಕುರಕುಂದಾ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ನೀಡಿರುವ ಅವರು ಅಡ್ವಾಣಿ ತಿರಸ್ಕರಿಸಿದಾಗ ಸುಮ್ಮನಿದ್ದ ಅನಂತಕುಮಾರ್  ಈಗ ಚುನಾವಣೆಯಲ್ಲಿ ಏಕಾಏಕಿ 371ನೇ ವಿಧಿ ಬಗ್ಗೆ ಮಮತೆ ಉಕ್ಕಿ ಬಂತೇ ಎಂದು ಪ್ರಶ್ನಿಸಿದ್ದಾರೆ.
ಕಣ್ಣು ತೆರೆದು ನೋಡಲಿ: ಖರ್ಗೆ-ಧರಂ ಈ ಭಾಗಕ್ಕೆ ಏನು ಮಾಡಿದ್ದಾರೆ ಎಂದು ಪದೇ ಪದೇ ಕೇಳುತ್ತಿರುವ ಬಿಜೆಪಿ ಮುಖಂಡರು ಒಂದು ಬಾರಿ ಕಣ್ಣು ತೆರೆದು ನೋಡಲಿ. ಬೇಕಿದ್ದರೆ ಅವರಿಗಾಗಿ ಒಂದು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿ ಕೇಂದ್ರೀಯ ವಿವಿ, ಇಎಸ್‌ಐಸಿ ಆಸ್ಪತ್ರೆ, ರೇಲ್ವೆ ವಿಭಾಗ, ಯಾದಗಿರಿಯ ರೇಲ್ವೆ ಕೋಚ್ ಫ್ಯಾಕ್ಟರಿ ತೋರಿಸಲಾಗುವುದು. ಬಿಜೆಪಿ ಅಭ್ಯರ್ಥಿ ರೇವೂನಾಯಕ ಏಳು ವರ್ಷ ಸಚಿವರಾಗಿದ್ದರೂ ದನಗಳಿಗೆ ಕುಡಿವ ನೀರು, ಆಸ್ಪತ್ರೆ ನಿರ್ಮಿಸಲು ವಿಫಲರಾಗಿದ್ದಾರೆ. ಹೀಗಾಗಿಯೇ 2013ರ ವಿಧಾನಸಭೆ ಹಾಗೂ 2009ರ ಲೋಕಸಭೆ ಎರಡೂ ಚುನಾವಣೆಯಲ್ಲಿ ತಕ್ಕಪಾಠ ಜನರೇ ಕಲಿಸಿದ್ದಾರೆ ಎಂದಿದ್ದಾರೆ.
ಕರ್ನಾಟಕಕ್ಕಿಂತಲೂ ಗುಜುರಾತ್ ಅಭಿವೃದ್ಧಿಯಲ್ಲಿ ಹಿಂದಿದೆ. ವಿನಾಕಾರಣ ಗುಜರಾತ್ ಮಾದರಿ ಎಂದು ಹೇಳಿ ಜನರ ದಾರಿ ತಪ್ಪಿಸಲಾಗುತ್ತಿದ್ದು, ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಆಹ್ವಾನ ನೀಡಿದ್ದಾರೆ.
ಶಾಸಕ ರಾಮಕೃಷ್ಣ ಪ್ರಚಾರ
ಶಹಾಬಾದ್: ನಗರದ ವಾರ್ಡ್ 19ರ ಮಿಲತ್ ನಗರ, ಬಸವೇಶ್ವರ ನಗರ, ಪೊಲೀಸ್ ಕ್ವಾರ್ಟಸ್ ಭಾಗದಲ್ಲಿ ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರ ಶಾಸಕ ಜಿ.ರಾಮಕೃಷ್ಣ ಶುಕ್ರವಾರ ಲೋಕಸಭಾ ಅಭ್ಯರ್ಥಿ ಡಾ.ಮಲ್ಲಿಕಾರ್ಜುನ ಖರ್ಗೆ ಪರ ಚುನಾವಣಾ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಗುಲ್ಬರ್ಗದ ಅಭಿವೃದ್ಧಿಗೆ ಕೇಂದ್ರ ಸಚಿವರಾಗಿ ಸಾಕಷ್ಟು ಕೆಲಸ ಮಾಡಿದ ಖರ್ಗೆ ಸರಳವಾಗಿ ಗೆಲವ ಸಾಧಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಎಂ.ಎ. ರಶೀದ, ಡಿಸಿಸಿ ಕಾರ್ಯದರ್ಶಿ ಸಂತೋಷಕುಮಾರ ಇಂಗಿನಶೆಟ್ಟಿ, ಹಿರಿಯ ಮುಖಂಡರಾದ ನಿಂಗಣ್ಣ ದೇವಕರ್, ವಿಜಯಕುಮಾರ ಮುಟ್ಟತ್ತಿ, ಶಿವಾನಂದ ಪಾಟೀಲ ಮರತೂರ, ಶರಣಗೌಡ ಪ್ರೊ. ಪಾಟೀಲ ಗೋಳಾ (ಕೆ), ಮೃತ್ಯುಂಜಯ ಸ್ವಾಮಿ ಹಿರೇಮಠ, ಮ.ರಫೀಕ ಕಾರೋಬಾರಿ, ಸುರೇಶ ನಾಯಕ ಸೇರಿದಂತೆ ಅಪಾರ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement