ಕೇಂದ್ರದಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಪ್ಯಾಟಿ
ಆಳಂದ: ಈ ಬಾರಿ ದೇಶದ ಎಲ್ಲಾ ಭಾಗಗಳಲ್ಲಿ ಮೋದಿ ಅಲೆ ಇದ್ದು, 280ಕ್ಕೂ ಹೆಚ್ಚು ಸ್ಥಾನಗಳನ್ನು ಜಯಸುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಮುಖಂಡ ಶಾಮರಾವ ಪ್ಯಾಟಿ ಹೇಳಿದರು. ತಾಲೂಕಿನಲ್ಲಿ ನಿಂಬರ್ಗಾ ಗ್ರಾಮದಲ್ಲಿ ಬೀದರ್ ಲೋಕಸಭಾ ಅಭ್ಯರ್ಥಿ ಭಗವಂತ ಖೂಬಾ ಪರ ಬಿರುಸಿನ ಪ್ರಚಾರ ಕೈಗೊಂಡು ಮಾತನಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ನದಿ ಜೋಡಣೆ, ರೈತರಿಗೆ ವಿಶೇಷ ಕೊಡುಗೆ, ಯುವಕರಿಗೆ ಉದ್ಯೋಗ ಅವಕಾಶ, ಭ್ರಷ್ಟಾಚಾರ ಮುಕ್ತ ಸರ್ಕಾರ, ಹೆಣ್ಣು ಮಕ್ಕಳಿಗೆ ಸಬಲೀಕರಣ ಯೋಜನೆ, ಅಟಲಜಿ ಅವರ ಕನಸು ನನಸು ಮಾಡುವುದಾಗಿದೆ. ಈ ಭಾರಿ ಕೇಂದ್ರದಲ್ಲಿ ಮೋದಿ ಸರ್ಕಾರ ಖಚಿತ ಎಂದರು. ಬೀದರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧರ್ಮಸಿಂಗ್ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು. ಲೋಕಸಭಾ ಅಭ್ಯರ್ಥಿ ಭಗವಂತ ಖೂಬಾ, ಮಾಜಿ ಶಶಿಲ್ ಜಿ. ನಮೋಶಿ, ತಾಲೂಕು ಅಧ್ಯಕ್ಷ ರಮೇಶ ಲೋಹಾರ, ಮಾಜಿ ಗ್ರಾಪಂ ಅಧ್ಯಕ್ಷರಾದ ಶಿವಾನಂದ ಬಿರಾದಾರ, ಸಂಗಣ್ಣಾ ಮುದ್ದಡಗಿ, ಸಂಜಯ ಮಿಸ್ಕಿನ, ಕಾಶಿನಾಥ ಸುತಾರ, ವಿರೂಪಾಕ್ಷಪ್ಪ ವಾಗ್ದರಿ, ಅಣ್ಣಪ್ಪ ತಳಕೇರಿ, ಶರಣು ಬೆಳಮಗಿ, ಗುರುಶಾಂತಪ್ಪ ದುತ್ತರಗಿ, ರೇಣಸಿದ್ದಪ್ಪ ಪಟ್ನೆ ಪಾಲ್ಗೊಂಡಿದ್ದರು.