ಪಟ್ಟಭದ್ರ ಶಕ್ತಿಗಳಿಂದ ದೇಶಕ್ಕೆ ಆಪತ್ತು: ಖರ್ಗೆ
ಗುರುಮಠಕಲ್: ನರೇಂದ್ರ ಮೋದಿಗೆ ದೇಶದ ಅಡಳಿತ ಚುಕ್ಕಾಣಿ ನೀಡಲು ಹೊರಟಿರುವ ಆರ್ಎಸ್ಎಸ್ನಂತಹ ಪಟ್ಟಭದ್ರ ಶಕ್ತಿಗಳಿಂದ ದೇಶಕ್ಕೆ ಅಪತ್ತು ಕಾದಿದೆ ಎಂದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಸಿದ್ದಾರೆ.
ಅವರು, ಪ್ರಚಾರದ ಕೊನೆಯ ದಿನವಾದ ಮಂಗಳವಾರ ಗುರುಮಠಕಲ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಬಿಜೆಪಿಯವರು ನರೇಂದ್ರಮೋದಿ ಗುಜರಾತ ರಾಜ್ಯವನ್ನು ಮಾದರಿಯಾಗಿ ಮಾಡಿದ್ದಾರೆ ಎಂದು ಹೇಳಿಕೊಂಡು ಜನರ ಹತ್ತಿರ ಮತ ಕೇಳುತ್ತಿದ್ದಾರೆ. ಅದರೆ ಗುಜರಾತಿನಲ್ಲಿ ಆಗಿರುವ ಅಭಿವೃದ್ಧಿ ಏನು? ಕೋಮುವಾದದ ಹೆಸರಿನಲ್ಲಿ ಜನತೆಯನ್ನು ಹತ್ಯೆ ಮಾಡುವುದೆ ಅಭಿವೃದ್ಧಿಯೇ ಎಂದು ಪ್ರಶ್ನಿಸಿದರು.
ತೀರಾ ಹಿಂದೆ ಉಳಿದಿದೆ: ಅಭಿವೃದ್ಧಿ ವಿಷಯದಲ್ಲಿ ಗುಜರಾತ್, ಕರ್ನಾಟಕಕ್ಕಿಂತ ತೀರಾ ಹಿಂದೆ ಉಳಿದಿದೆ. ಗುಜರಾತನಲ್ಲಿ ಇಂದಿಗೂ ಅಪೌಷ್ಟಕತೆಯಿಂದ ಮಕ್ಕಳು ಪ್ರತಿನಿತ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವೆಲ್ಲವೂ ಮೋದಿ ಅಸಹಾಯಕತೆ ತೋರುತ್ತದೆ ಎಂದರು.