ಕೆಲವೆಡೆ ಕೈಕೊಟ್ಟ ಮತಯಂತ್ರಗಳು
ಕ.ಪ್ರ.ವಾರ್ತೆ ್ಣ ಯಾದಗಿರಿ ್ಣ ಏ.17
ಜಿಲ್ಲೆಯಾದ ನಂತರ ಪ್ರಥಮ ಭಾರಿಗೆ ನಡೆದ ಲೋಕಸಭಾ ಚುನಾವಣೆಯ ಮತದಾನಕ್ಕೆ ಜಿಲ್ಲೆಯಾದ್ಯಂತ ಕೊಂಕಲ್ ಮತ್ತು ಕೆಲವುಡೆ ಸಣ್ಣಪುಟ್ಟ ಗಲಾಟೆ ಬಿಟ್ಟರೆ ಉಳಿದ ಕಡೆ ಬಹುತೇಕ ಮತದಾನ ಶಾಂತಿಯುತವಾಗಿ ನಡೆಯಿತು.
ಸುಮಾರು ಶೇ. 53 ರಷ್ಟು ಮತದಾನವಾಗಿರುವ ಅಂದಾಜು ಮಾಡಲಾಗಿದೆ. ಗುಲ್ಬರ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗುರುಮಠಕಲ್ ವಿಧಾನ ಸಭಾ ಕ್ಷೇತ್ರ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಾದಗಿರಿ, ಶಹಾಪುರ ಮತ್ತು ಸುರಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ದಿನ ಮಧ್ಯಾಹ್ನ 3 ಗಂಟೆವರೆಗೂ ನೀರಸ ಮತದಾನವಾಗಿತ್ತು.
ದೋರನಹಳ್ಳಿ, ಶಹಾಪುರ ಪಟ್ಟಣ, ಹತ್ತಿಗುಡೂರ, ದೀವಳಗುಡ್ಡ, ಸುರಪುರ ಪಟ್ಟಣ, ದೇವಪುರ ಹಾಗೂ ಕೃಷ್ಣಪುರ ಇನ್ನು ಅನೇಕ ಗ್ರಾಮಗಳಲ್ಲಿ ಬೆಳಗ್ಗೆಯೇ ಜನರು ಬರಬಹುದೆಂದು ನಿರೀಕ್ಷಿಸಿದ್ದ ಅಧಿಕಾರಿಗಳ ಭರವಸೆ ಹುಸಿಯಾಗಿತ್ತು. ನಂತರ ಮಂದಗತಿಯಲ್ಲಿ ಮತದಾನ ನಡೆಯಿತು.
ನೀಲಕಂಠರಾಯನ ದೊಡ್ಡಿಯಲ್ಲಿ ಬಹಿಷ್ಕಾರ: ಸುರಪುರ ತಾಲೂಕಿನ ನೀಲಕಂಠರಾಯದೊಡ್ಡಿ ಗ್ರಾಮದಲ್ಲಿ ರಸ್ತೆ ಮತ್ತು ಮೂಲಸೌಕರ್ಯಕ್ಕೆ ಆಗ್ರಹಿಸಿ ಬೆಳಿಗ್ಗೆ 7ರಿಂದ ಮತದಾನ ಬಹಿಷ್ಕಾರ ಮಾಡಿದ್ದರು. ಆದ್ದರಿಂದ ಸ್ಥಳಕ್ಕೆ ಆಗಮಿಸಿದ ಕೆಲವು ಮುಖಂಡರ ಗ್ರಾಮಸ್ಥರ ಮನ ಒಲಿಸಿದ ಪರಿಣಾಮ, ಮಧ್ಯಾಹ್ನ 3 ರಿಂದ ಮತದಾನ ಮಾಡಲು ಒಪ್ಪಿಕೊಂಡು ಮತದಾನ ಮಾಡಿದರು.
ಆನೂರ ಕೆ ಗ್ರಾಮದಲ್ಲಿ ಮತದಾನ ಸ್ಥಗಿತ: ತಾಲೂಕಿನ ಆನೂರ(ಕೆ) ಗ್ರಾಮದಲ್ಲಿ ಕುಡಿವ ಮತ್ತು ಉತ್ತಮ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬೆಳಿಗ್ಗೆ 2 ಗಂಟೆಗಳ ಕಾಲ ಮತದಾನ ಬಷ್ಕರಿಸಿದ ಘಟನೆ ನಡೆದಿದೆ. ನಂತರ ಅಧಿಕಾರಿಗಳ ಗ್ರಾಮಸ್ಥರ ಓಲೈಸಿದ ನಂತರ ಮತದಾನದ ಬಹಿಷ್ಕಾರವನ್ನು ಹಿಂತೆಗೆದುಕೊಂಡ ಗ್ರಾಮಸ್ಥರು, ನಂತರ ಮತದಾನ ಮಾಡಿದರು.