ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರಮುಖ ನಾಯಕರಿಂದ ಮತದಾನ

Mainashree
Updated On : 18 Apr 2014, 10:25 am

ಗುಲ್ಬರ್ಗ: ಗುರುವಾರ (ಏ. 17)ಉರಿ ಬಿಸಿಲಿನ ಪ್ರತಾಪದಿಂದಾಗಿ ಮತದಾರ ಪರಿತಪಿಸುತ್ತ ಮನೆಯಲ್ಲೇ ಕುಳಿತ. ಹೊರಗೇ ಬರಲೇ ಇಲ್ಲ. ನಿರೀಕ್ಷೆಯಂತೆ ಜಿಲ್ಲೆಯ ಎಲ್ಲ ಕಡೆ ಬಿಸಿಲಿನಿಂದಾಗಿ ಮತದಾನದ ಪ್ರಮಾಣ ಅಷ್ಟಾಗಿ ಹೆಚ್ಚಾಗಿರಲಿಲ್ಲ. ಅದರಲ್ಲೂ ಪ್ರತಿ ಚುನಾವಣೆಯಲ್ಲಿ ಅಧಿಕ ಮತದಾನದಿಂದ ಗಮನ ಸೆಳೆಯುತ್ತಿದ್ದ ಗುಲ್ಬರ್ಗ ಉತ್ತರ ಅಸೆಂಬ್ಲಿ ಕ್ಷೇತ್ರದ ಅದೆಷ್ಟ್ಟೋ ಮತಗಟ್ಟೆಗಳಲ್ಲಿಯೂ ಮತದಾನ ನೀರಸವಾಗಿತ್ತು. ಬಿಸಿಲಿನ ತಾಪದ ಜೊತೆಗೇ ಸ್ಥಳೀಯ ಅನೇಕ ಕಾರಣಗಳೂ ಈ ರೀತಿಯ ನೀರಸ ಮತದಾನಕ್ಕೆ ಕಾರಣ ಎಂಬ ಮಾತುಗಳು ಅಲ್ಲಿ  ಕೇಳಿಬಂದವು.
ದಂಪತಿಗಳ ಮತದಾನ: ಗುಲ್ಬರ್ಗದಲ್ಲಿ ಪುನರಾಯ್ಕೆ ಬಯಸಿ ಕಣದಲ್ಲಿರುವ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಪತ್ನಿ ರಾಧಾಬಾಯಿಯವರೊಂದಿಗೆ, ಬಿಜೆಪಿ ಎಂಎಲ್ಸಿ ಅಮರನಾಥ ಪಾಟೀಲ್ ಪತ್ನಿ ಕವಿತಾ ಪಾಟೀಲರೊಂದಿಗೆ, ಜವಳಿ ಸಚಿವ ಬಾಬೂರಾವ ಚಿಂಚನಸೂರ್ ಪತ್ನಿ ಭುವನೇಶ್ವರಿ ದೇವಿ ಜತೆಗೆ ಹಾಗೂ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಬೆಳಮಗಿ ತಾಂಡಾದಲ್ಲಿ ಪತ್ನಿ ಜೀಮಾಬಾಯಿ ಜತೆ ಮತದಾನ ಮಾಡಿ ಗಮನ ಸೆಳೆದರು.
ಗುಲ್ಬರ್ಗ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ದಂಪತಿ ಸಮೇತ ಮತಗಟ್ಟೆಗೆ ಬಂದರಾದರೂ ತಾಯಿ ಅರುಣಾ ಅವರೊಂದಿಗೆ ತಮ್ಮ ಪತ್ನಿಯನ್ನು ನೆರವಿಗೆ ಬಿಟ್ಟು ತಾವೊಬ್ಬರೇ ಮತದಾನ ಮಾಡಿದರು. ಮತದಾನಕ್ಕೆಂದು ದತ್ತಾತ್ರೇಯ ಪಾಟೀಲ್ ಎಲ್ಲರಂತೆ ಸರತಿಯಲ್ಲಿ ನಿಂತರು. ದತ್ತಾತ್ರೇಯ ಪಾಟೀಲರ ಜತೆಗೆ ವಿಜಯ ಸೇವಲಾನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement