ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅರಕೇರಾದಲ್ಲಿ ಶರಣ ಸಮ್ಮೇಳನ

Mainashree
Updated On : 20 Apr 2014, 11:17 am

ಯಾದಗಿರಿ: ತಾಲ್ಲೂಕಿನ ಅರಕೇರಾ ಕೆ. ಗ್ರಾಮದ ಸಿದ್ಧಾರೂಢಸ್ವಾಮಿ ಬ್ರಹ್ಮ ವಿದ್ಯಾಶ್ರಮದಲ್ಲಿ ಈಚೆಗೆ ಶರಣ ಸಮ್ಮೇಳನ ನಡೆಯಿತು.
  ಸಮ್ಮೇಳನದ ಮೊದಲ ದಿನ ಸಿದ್ಧಾರೂಢ ಸ್ವಾಮಿ, ಸಿದ್ಧಿ ವಿನಾಯಕ ಹಾಗೂ ದ್ವಾದಶ ಜ್ಯೋತಿರ್ಲಿಂಗಗಳಿಗೆ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಹಾಗೂ ಪ್ರಣವ ಧ್ವಜಾರೋಹಣ ಜರುಗಿತು. ಸಿದ್ಧಾರೂಢ ಸ್ವಾಮಿ ಜಯಂತ್ಯುತ್ಸವದ ಅಂಗವಾಗಿ ನಡೆದ ತೊಟ್ಟಿಲೋತ್ಸವಕ್ಕೆ ಯಾದಗಿರಿ ನಗರಸಭೆ ಸದಸ್ಯೆ ಶೀತಲ ಶಿಂಧೆ ಚಾಲನೆ ನೀಡಿದರು.
  ಎರಡನೇ ದಿನದ ಕಾರ್ಯಕ್ರಮಲ್ಲಿ ಸಿದ್ಧಲಿಂಗ ಸ್ವಾಮೀಜಿ ರಚಿಸಿದ ಕಥಾಮೃತಧಾರೆ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಕೈಲಾಸ ಮಂಟಪವನ್ನು ಉದ್ಘಾಟಿಸಲಾಯಿತು. ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೂರನೆಯ ದಿನ ಗ್ರಾಮದ ಹನುಮಾನ ದೇವಾಲಯದಿಂದ ಕುಂಭ, ಕಳಶಗಳೊಂದಿಗೆ ಸಿದ್ಧಾರೂಢರ ಹಾಗೂ ಬಸವಣ್ಣನವರ ವೇದ, ಉಪನಿಷತ್ತು ಹಾಗೂ ವಚನ ಸಾಹಿತ್ಯವನ್ನು ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು. ನ್ಯಾಯಾಧೀಶರಾದ ಎಂ.ಸಿ. ಬಿರಾದಾರ ಹಾಗೂ ಲಿಂಗಣ್ಣಗೌಡ ಮಲ್ಹಾರ ಅವರಿಗೆ ಆರೂಢಶ್ರೀ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಗದಗನ ಶಿವಾನಂದ ಸ್ವಾಮೀಜಿ, ನವಲಗುಂದದ ವಿರೇಂದ್ರ ಸ್ವಾಮೀಜಿ, ಆಚಾರ್ಯ ಜಗದೀಶ್ವರ ಸ್ವಾಮೀಜಿ, ನೀರಮಾನ್ವಿಯ ಯಲ್ಲಾಲಿಂಗ ಸ್ವಾಮೀಜಿ, ಬಾಬು ಮುಂಬೈ, ಚಿದಾನಂದಸ್ವಾಮಿ ಉಟ್ಕೂರು, ಮಹಾದೇವಯ್ಯ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement