ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾನೂನಿಂದ ಸಂಬಂಧ ಬೆಸೆಯಲಿಕ್ಕೆ ಆಗುವುದಿಲ್ಲ: ನ್ಯಾ. ಪಾಚಾಪುರೆ

Rashmi Kasaragodu
Updated On : 22 Apr 2014, 11:45 am

ಶಹಾಬಾದ್: ನಮ್ಮಲ್ಲಿರುವ ಕೆಟ್ಟ ವಿಚಾರಗಳು ಹೋಗಬೇಕು. ಸಕಾರಾತ್ಮಕ ವಿಚಾರಗಳು ಬರಬೇಕಾಗಿದೆ. ಮನುಷ್ಯನ ಸಂಬಂಧಗಳನ್ನು ಬೆಸೆಯುವ ಕೆಲಸ ಕಾನೂನು ಮಾಡುವುದಿಲ್ಲ. ಸಂಬಂಧಗಳ ಜೋಡಣೆಯ ಕಾರ್ಯ ಕಾನೂನಿನಿಂದ ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಎ.ಎಸ್. ಪಾಚಾಪುರೆ ಅಭಿಪ್ರಾಯಪಟ್ಟರು.
ನಗರದ ಎಸ್.ಎಸ್. ಮರಗೋಳ ಮಹಾವಿದ್ಯಾಲಯದಲ್ಲಿ ಯುಜಿಸಿ ಸಹಯೋಗದೊಂದಿಗೆ ಮಾನವ ಹಕ್ಕುಗಳ ಜಾಗೃತಿ ಮತ್ತು ತರಬೇತಿ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಮಾತನಾಡಿದರು. ಇಂದು ತಂದೆ, ತಾಯಿ, ಸಹೋದರ, ಸಹೋದರಿ ಸಂಬಂಧಗಳು ಕೆಟ್ಟು ಹೋಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿ ಭಾರತೀಯ ಸಂಸ್ಕೃತಿಯಿಂದ ಸಂಬಂಧಗಳನ್ನು ಬೆಸೆಯಲು ಸಾಧ್ಯ ಎಂದು ಹೇಳಿದರು.
ಸಾವಿರಾರು ಜನರ ಸಾವಿಗೆ ಕಾರಣ: ಗುಲ್ಬರ್ಗ ವಿಶ್ವವಿದ್ಯಾಲಯದ ಕಾನೂನು ಬೋಧಕರಾದ ಡಾ. ಜೆ.ಎಸ್. ಪಾಟೀಲ ಮಾತನಾಡಿ, ಜಗತ್ತಿನಲ್ಲಿ ಮಾನವ ಹಕ್ಕುಗಳು ಹುಟ್ಟಿನಿಂದ ನೈಸರ್ಗಿಕವಾಗಿ ಬಂದಿದ್ದಾಗಿದೆ. ದುರಾದೃಷ್ಟವಶಾತ್ ಜಗತ್ತಿನಲ್ಲಿ ಮಾನವ ಹಕ್ಕುಗಳ ಹೆಸರಿನಲ್ಲಿ ಯುದ್ಧಗಳು ನಡೆದು ಸಾವಿರಾರು ಜನರ ಸಾವಿಗೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹೈಕಶಿ ಸಂಸ್ಥೆ ಉಪಾಧ್ಯಕ್ಷ ಬಾಬುರಾವ ಮಂಗಾಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಉದ್ಯಮಿ ಸೋಮಶೇಖರ ಮರಗೋಳ, ಪ್ರಾಚಾರ್ಯ ಡಾ. ಅನೀಲಕುಮಾರ ಕೊಪ್ಪಳಕರ ಉಪಸ್ಥಿತರಿದ್ದರು. ಅಲ್ಸಟಾಮ್‌ನ ಅಧಿಕಾರಿ ರಮೇಶ ಮಹೇಂದ್ರಕರ್, ಎನ್.ಎ. ಕಾರ್ಗಿ, ಸುರೇಶ ವಿ.ಕಾರ್ಮಿಕ ಮುಖಂಡ ಮಲ್ಲೇಶಿ ಸಜ್ಜನ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಪ್ರತಿನಿಧಿಗಳು ಇದ್ದರು. ಬಿ.ಎಸ್. ಪಾಟೀಲ ನಿರೂಪಿಸಿದರು, ಡಾ. ಅನೀಲಕುಮಾರ ಕೊಪ್ಪಳಕರ ಸ್ವಾಗತಿಸಿದರು. ಮಾನು ಗುರಿಕಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement