ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಮನಟಗಿ- ತಾಳಿಕೋಟೆ ರಸ್ತೆ ದುರಸ್ತಿಗೆ ಆಗ್ರಹ

Rashmi Kasaragodu
Updated On : 22 Apr 2014, 11:46 am

ಹುಣಸಗಿ: ಸಮೀಪದ ಹುಣಸಗಿ ನಾರಾಯಣಪುರ  ಮುಖ್ಯರಸ್ತೆಯಿಂದ ಕುಪ್ಪಿ ತಾಂಡಾಕ್ಕೆ ಹೋಗುವ 4 ಕಿ.ಮೀ. ರಸ್ತೆ ತೀರಾ ಹದಗೆಟ್ಟಿದೆ. ಈ ರಸ್ತೆಯನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಕೃಷ್ಣ ಭಾಗ್ಯ ಜಲ ನಿಗಮದವರು ನಿರ್ಮಾಣ ಮಾಡಿದ್ದರು. ಕಳೆದ ನಾಲ್ಕು ವರ್ಷದಿಂದ ಈ ರಸ್ತೆಯ ಇಬ್ಬದಿಯಲ್ಲಿ ಬೆಳೆದ ಜಾಲಿ ತೆಗೆಯದೆ, ಮಣ್ಣು ಕೂಡಾ ಹಾಕದೆ ಕಡೆಗಣಿಸಲಾಗಿದೆ. ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರಿಂದ ನಿರ್ವಹಣಾ ಅವಧಿ ಇನ್ನೂ ಇದ್ದರೂ ಕೂಡಾ, ಅಧಿಕಾರಿಗಳು ಇವರಿಂದ ಕೆಲಸ ಮಾಡಿಸದೆ ಇರುವುದು, ಗ್ರಾಮಸ್ಥರ ಆಕ್ರೋಷಕ್ಕೆ ಕಾರಣವಾಗಿದೆ. ಈ ರಸ್ತೆಯನ್ನು ಬಳಸುವ ಕಾಮನಟಗಿ, ಹುಣಸಗಿ, ಕನಗಂಡನಹಳ್ಳಿ, ಕುಪ್ಪಿ, ದ್ಯಾಮನಾಳ, ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಅತಿ ಮುಖ್ಯವಾಗಿ ಕೃಷಿ, ದವಸ ಧಾನ್ಯ ಸಾಗಾಟಕ್ಕೂ ತೀವ್ರ ತೊಂದರೆಯಾಗಿದೆ. ಇದೇ ರಸ್ತೆಯು ತಾಳಿಕೋಟೆಗೆ ಹೋಗಲು ಬಹಳ ಅಲುಕೂಲ ಮತ್ತು 5. ಕಿ. ಮೀ. ಉಳಿತಾಯವೂ ಆಗುತ್ತದೆ.
 ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆ, ಅಥವಾ ಶಾಸಕರ ಅನುದಾನದಲ್ಲಿ ಡಾಂಬರೀಕರಣ ಮಾಡುವಂತೆ ಕುಪ್ಪಿ ಕಿಸಾನ್ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಗೌಡಪ್ಪಗೌಡ ಹಣಮರೆಡ್ಡಿ ಕುಪ್ಪಿ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement