ಪುರಸಭೆಗೆ ಲೋಕಾಯುಕ್ತರ ಭೇಟಿ ಇಂದಿನಿಂದ
ಶಹಾಬಾದ್: ಏ.22ರಿಂದ 24ರವರೆಗೆ ಲೋಕಾಯುಕ್ತರು, ಸಹಾಯಕ ಕಾರ್ಯಪಾಲಕ ಎಂಜನಿಯರ್-2 ರವರು ಪುರಸಭೆಗೆ ಭೇಟಿ ನೀಡಲಿದ್ದಾರೆ. ಸಾರ್ವಜನಿಕರು ತಮ್ಮ ಬಡಾವಣೆಯ ಚರಂಡಿ, ಒಳಚರಂಡಿ, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳು ಕಳಪೆ ಮಟ್ಟದಾಗಿದ್ದರೆ ಈ ಬಗ್ಗೆ ದೂರು ನೀಡಬಹುದು ಎಂದು ವಲಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದು ಪಂಚಾಳ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.