ರಸ್ತೆ ಅಪಘಾತ: ಇಬ್ಬರ ಸಾವು
ಯಾದಗಿರಿ: ಬೈಕ್ ಉರುಳಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ಶನಿವಾರ ಮಧ್ಯೆ ರಾತ್ರಿ ನಗರದ ಸಣ್ಣ ಕೆರೆ ಪಕ್ಕದಲ್ಲಿ ನಡೆದಿದೆ.
ಸೇಡಂ ತಾಲೂಕಿನ ಮದನಾ ಗ್ರಾಮದ ವೆಂಕಟೇಶ ಮದನಾ(28), ಹತ್ತಿಕುಣಿ ಗ್ರಾಮದ ಹರೀಶ ತಮ್ಮಣ್ಣೋರ್(26) ಮೃತರು. ವೇಗವಾಗಿ ಬಂದ ದ್ವಿಚಕ್ರ ವಾಹನವು ರಸ್ತೆ ಪಕ್ಕದಲ್ಲಿರುವ ಗ್ರಿಲ್ಗೆ ಡಿಕ್ಕಿ ಹೊಡೆದು ಈ ಅಘಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.