'ಶತಾಯುಷಿಗಳ ಆಶೀರ್ವಾದದಿಂದ ಭವರೋಗ ಮುಕ್ತಿ'
ಶಹಾಬಾದ್: ನಡೆದಾಡುವ ದೇವರೆಂದು ಪ್ರಖ್ಯಾತಿಯನ್ನು ಪಡೆದಿರುವ ಹೊನ್ನಕಿರಣಗಿಯ ಹಿರಿಯ ಪೀಠಾಧಿಪತಿ ಕರಬಸವೇಶ್ವರ ಶಿವಾಚಾರ್ಯರ ಆಶೀರ್ವಾದ ಪಡೆದವರಿಗೆ ಭವದ ರೋಗ ಕಳೆಯುವುದು ಎಂದು ಸುದ್ದಿವಾಹಿನಿಯ ಜ್ಯೋತಿಷ್ಯ ಗುರೂಜೀ ನರೇಂದ್ರ ಬಾಬು ಶರ್ಮಾ ಹೇಳಿದರು.
ಮಕ್ಕಳಿಲ್ಲದ ಹಾವೇರಿ ಜಿಲ್ಲೆಯ ಭಕ್ತನಿಗೆ ಇವರ ಕೃಪಾ ಆಶೀರ್ವಾದದಿಂದ ಸಂತಾನ ಭಾಗ್ಯ ಕರುಣಿಸಿದ್ದಾರೆ. ಇಂಥ ತಾತನವರು ಪಂಚ ಗೋವುಗಳ ಗೋಮಯದಿಂದ ಕಲ್ಪ ಭಸ್ಮವನ್ನು ತಯಾರಿಸುತ್ತಾರೆ. ಇದರಿಂದ ಈ ಶರಣರ ನಾಡಿನಲ್ಲಿ ಹೊನ್ನಕಿರಣಗಿ ಮಠವು ಕಲ್ಪಭಸ್ಮದ ಮಠ ಎಂದು ಪ್ರಸಿದ್ಧಿ ಎಂದರು.
ಕರಿಬಸವೇಶ್ವರ ಶಿವಾಚಾರ್ಯರ ಸಾನಿಧ್ಯ ವಹಿಸಿದ್ದರು. ಹೊನ್ನಕಿರಣಗಿ ಮಠದ ಪೀಠಾಧಿಪತಿ ಚಂದ್ರಗುಂಡ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಪಾಳದ ಗುರುಮೂರ್ತಿ ಶ್ರೀ, ಚರಂತೇಶ್ವರ ಶ್ರೀ ವೇದಿಕೆಯ ಮೇಲಿದ್ದರು.
ಬೆಳಗ್ಗೆ ಗೋಪೂಜೆ, ಮಧ್ಯಾಹ್ನ 5001 ಮುತ್ತೈದಿಯರಿಗೆ ಉಡಿ ತುಂಬಲಾಯಿತು. ಜನಜಾಗೃತಿ ಸಭೆ, ಧರ್ಮಸಭೆ, ಸಂಜೆ ಭಕ್ತರಿಂದ ಶತಾಯುಷಿ ಶ್ರೀಗಳಿಗೆ ತುಲಭಾರ ನಡೆಯಿತು. ರೇವಣಸಿದ್ದೇಶ್ವರ ಪುರಾಣವನ್ನು ಪುರಾಣಿಕರಾದ ವಿರುಪಾಕ್ಷಯ್ಯ ಮಂಗಳ ಮಾಡಿದರು. ಸಂಗಯ್ಯ ಸ್ವಾಮಿ ಯನಗುಂಟಾ, ವೇದಮೂರ್ತಿ ನಾಗಭೂಷಣ ಸ್ಥಾವರ ಮಠ ಇಂಗಳಗಿ ಸಂಗೀತ ಸೇವೆ ಮಾಡಿದರು.
ಅಮರಪ್ಪ ಜ್ಯೋತಿ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ, ವೀರಣ್ಣ ಯಾರಿ, ರವಿಕುಮಾರ ಅಲ್ಲಂಶೆಟ್ಟಿ, ಅಣ್ಣಾರಾವ ಮಾಲಿಪಾಟೀಲ, ಶ್ರೀಕಾಂತ ಕುಲ್ಕರ್ಣಿ, ಮಲ್ಲಣ್ಣ ಬಳವಡಗಿ, ಸಿದ್ದು ವಾರಕರ ಇತರರು ಇದ್ದರು.