ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಲಾವಿದರ ಜಿಲ್ಲಾ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ

Rashmi Kasaragodu
Updated On : 23 Apr 2014, 12:03 pm

ಯಾದಗಿರಿ: ಜಿಲ್ಲಾ ರಂಗ ಸಾಹಿತ್ಯ ಸಂಗೀತ ಕಲಾವಿದರ ಸಾಂಸ್ಕೃತಿಕ ಮತ್ತು ಹಿತರಕ್ಷಣಾ ಸಮಿತಿಯನ್ನು ರಚಿಸಲಾಗಿದ್ದು, ಇತ್ತೀಚಿಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
 ಹಿರಿಯ ರಂಗ ಕಲಾವಿದ ಡಿ.ಎಸ್. ಕುಮಾರ ಅಧ್ಯಕ್ಷತೆಯಲ್ಲಿ ಸೇರಿದ್ದ ಸಭೆಯಲ್ಲಿ ಯಾದಗಿರಿ, ಸುರಪುರ, ಶಹಾಪುರ ಹಾಗೂ ಗುರುಮಠಕಲ್ ತಾಲೂಕು ವ್ಯಾಪ್ತಿಯ ರಂಗ ಕಲಾವಿದರ ಸಭೆಯಲ್ಲಿ ಭಾಗವಹಿಸಿದ್ದರು. ಸಮಿತಿ ಪದಾಧಿಕಾರಿಗಳು ಡಿ.ಎಸ್. ಕುಮಾರ (ಗೌರವಾಧ್ಯಕ್ಷರು), ಶರಣಪ್ಪ ಲಕ್ಷ್ಮಣ ತೋರಣಕರ್(ಅಧ್ಯಕ್ಷರು), ಜ್ಞಾನೇಶ್ವರ ಸಂದೇನ್ಕರ್, ಮಹಾಂತಯ್ಯ ಸ್ವಾಮಿ ಹಿರೇಮಠ ಖಾನಾಪುರ, ಚಂದ್ರಹಾಸ ಸುರಪುರ, ಶ್ರೀನಿವಾಸರೆಡ್ಡಿ ಸಣ್ಣಸಂಭರ, ಅಮರೇಶ ಶೆಳ್ಳಗಿ (ಉಪಾಧ್ಯಕ್ಷರು), ಶರಣು ಎಸ್.ನಾಟೀಕರ್ (ಪ್ರಧಾನ ಕಾರ್ಯದರ್ಶಿ), ಶಂಕರ ಶಾಸ್ತ್ರೀ ಶಿರವಟ್ಟಿ (ಸಹ ಕಾರ್ಯದರ್ಶಿ), ಮಲ್ಲಯ್ಯ ಸ್ವಾಮಿ ಸೈದಾಪುರ, ಡಾ.ಎಂ. ಕರಿಬಸಪ್ಪ ಹೊಳಿ, ಮರಿಗೌಡ ಅಣಬಿ, ಸಂಗಣ್ಣ ದೋರನಳ್ಳಿ (ಸಂಘಟನಾ ಕಾರ್ಯದರ್ಶಿ), ಅಡಿವೆಪ್ಪ ತಳವಾರ(ಕಾನೂನು ಸಲಹೆಗಾರ), ಶರಣು ಎಸ್.ಗದ್ದುಗೆ (ಹಿರಿಯ ಸಲಹೆಗಾರರು), ಸಂಗಣ್ಣ ತಡಿಬಿಡಿ, ಮಲ್ಲಿಕಾರ್ಜುನ ಕೂಡಲಗಿಕರ್, ಮಹಾದೇವಪ್ಪ, ನಿಂಗಯ್ಯ ಗಣಾಚಾರಿ ಕಲ್ಲದೇವನಹಳ್ಳಿ, ಬಸವರಾಜ(ಸದಸ್ಯರು) ಅವರನ್ನು ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement