ಚಿಣ್ಣರ ಅಂಗಳ ವಿಶೇಷ ಕೇಂದ್ರ ಪ್ರಾರಂಭ
ಗುರುಮಠಕಲ್: ಇಲ್ಲಿಗೆ ಸಮೀಪದ ಪುಟಪಾಕ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಮಾಧ್ಯಮ ಶಾಲೆಯಲ್ಲಿ 2014-15ನೇ ಸಾಲಿನ ವಿಶೇಷ ಚಿಣ್ಣರ ಅಂಗಳ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಶಿಕ್ಷಕಿ ಉಮಾದೇವಿ ಮಾತನಾಡಿ, ಸರ್ಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಮಕ್ಕಳಿಗೆ ಉಚಿತವಾಗಿ ಪೌಷ್ಟಿಕ ಆಹಾರ, ಬಟ್ಟೆ, ಸೈಕಲ್ ಸೇರಿದಂತೆ ನಾನಾ ರೀತಿಯ ಸೌಲಭ್ಯಗಳನ್ನು ನೀಡುತ್ತ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಪಾಲಕರು ಇದರ ಉಪಯೋಗವನ್ನು ಪಡೆದು ತಮ್ಮ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕರಿಸಲು ತಿಳಸಿದರು.
ಕಾರ್ಯಕ್ರಮವನ್ನು ಎಸ್ಡಿಎಂ ಅಧ್ಯಕ್ಷ ಶಿವಕುಮಾರ ಉದ್ಘಾಟಿಸಿದರು. ರಾಜೇಂದ್ರ ತಮ್ಮನ್, ಬಿಆರ್ಸಿ ವೆಂಕಟರಡ್ಡಿ, ಸಿಆರ್ಸಿ ಸೈಯದ್ ಯೂನುಸ್, ಎಸ್ಡಿಎಂಸಿ ಸದಸ್ಯರಾದ ಅಬ್ದುಲ್ ಅಜೀಜ್, ತಿರುಪತಿ, ಮದರಪ್ಪ, ಶರಣಪ್ಪ, ದೇವಿಂದ್ರಪ್ಪ, ಸೇರಿದಂತೆ ಪೋಷಕರು, ಗ್ರಾಮದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.