ಮೂಲ ಸೌಕರ್ಯ ಒದಗಿಸಲು ಕಬ್ಬಲಿಗ ಸಮಾಜ ಆಗ್ರಹ
ಯಾದಗಿರಿ: ತಾಲೂಕಿನ ಹೊಸಳ್ಳಿ(ಆರ್) ಗ್ರಾಮಕ್ಕೆ ರಸ್ತೆ, ಚರಂಡಿ, ನೀರು ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಜಿಲ್ಲಾ ಟೋಕರಿ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಉಮೇಶ ಮುದ್ನಾಳ ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಎಲ್ಲಂದರಲ್ಲಿ ರಸ್ತೆಗಳು ತಗ್ಗು ದಿಣ್ಣೆಯಿಂದ ಕೂಡಿದೆ ಹಳ್ಳಿಯೊಳಗೆ ಚರಂಡಿ ಇಲ್ಲದೆ ರಸ್ತೆಯ ಮೇಲೆ ನಿಂತಿರುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ. ಹೊಸಳ್ಳಿ (ಆರ್) ಗ್ರಾಮದಲ್ಲಿ ಇದಕೆಲ್ಲಾ ಹಳಿಗೇರಾ ಗ್ರಾಪಂ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಜಿಪಂ ಸಿಇಒ ಖುದ್ದಾಗಿ ಹೊಸಳ್ಳಿ (ಆರ್) ಗ್ರಾಮಕ್ಕೆ ಭೇಟಿ ನೀಡಿ ತಕ್ಷಣವೇ ಸೌಕರ್ಯ ಒದಗಿಸಿಕೊಡಬೇಕೆಂದು ಮುದ್ನಾಳ ಆಗ್ರಹಿಸಿದ್ದಾರೆ.