ದಿ. ಶಕುಂತಲಾ ಬಂಗಾರಪ್ಪಗೆ ಶ್ರದ್ಧಾಂಜಲಿ
ಚಿತ್ತಾಪುರ: ಮಾಜಿ ಸಿಎಂ ದಿ. ಬಂಗಾರಪ್ಪನವರ ಪತ್ನಿ ದಿ. ಶಕುಂತಲಾ ನಿಧನಕ್ಕೆ ತಾಲೂಕು ಆರ್ಯ ಈಡಿಗ ಸಮಾಜ ಪಟ್ಟಣದ ಹಳೆ ಸೇಂದಿ ಡಿಪೋದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಸಮಾಜದ ಸಂಘಟನಾ ಕಾರ್ಯದರ್ಶಿ ನರಸಯ್ಯ ಗುತ್ತೇದಾರ ಮಾತನಾಡಿದರು. ಸಮಾಜದ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಗುತ್ತೇದಾರ ಮಾತನಾಡಿದರು. ಗೌರವಾಧ್ಯಕ್ಷ ರಾಜಣ್ಣ ಮುಸ್ತೇಜಾರ ಮಾತನಾಡಿದರು. ಸಮಾಜದ ತಾಲೂಕು ಅಧ್ಯಕ್ಷ ವಿನೋದ ಗುತ್ತೇದಾರ ದಿ.ಶಕುಂತಲಾ ಭಾವಚಿತ್ರಕ್ಕೆ ಪೂಜೆ ಮಾಡಿ ನಮನ ಸಲ್ಲಿಸಿದರು.ನಾಗಯ್ಯ ಗುತ್ತೇದಾರ, ಕಾಶಣ್ಣ ಗುತ್ತೇದಾರ ಕರದಾಳ, ಶರಣಬಸಪ್ಪ ಗುತ್ತೇದಾರ ಸಾತನೂರ ಇದ್ದರು.