ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀರಿನ ಸಮಸ್ಯೆ ನಿವಾರಣೆಗೆ ವಾರದ ಗಡುವು

Rashmi Kasaragodu
Updated On : 25 Apr 2014, 10:45 am

ಆಳಂದ: ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಉದ್ಭವಿಸಿದ ಕುಡಿಯುವ ನೀರಿನ ಸಮಸ್ಯೆಯನ್ನು ವಾರದಲ್ಲಿ ನಿವಾರಿಸದೆ ಹೋದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ಆರ್. ಪಾಟೀಲ ಜಿಲ್ಲಾಡಳಿತಕ್ಕೆ ಗಡುವು ನೀಡಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ, ಕುಡಿಯುವ ನೀರಿನ ಗಂಭೀರ ಸಮಸ್ಯೆ ಉದ್ಭವವಾಗಿದೆ. ಲೋಕಸಭಾ ಚುನಾವಣೆ ಪೂರ್ವದಲ್ಲಿ ಗ್ರಾಪಂ ಅಧ್ಯಕ್ಷ ಮತ್ತು ಸಂಬಂಧಿತ ಅಧಿಕಾರಿಗಳ ಸಭೆ ಕರೆದು ಕಾರ್ಯಪಡೆ ಮುಂದೆ ಒಪ್ಪಿಗೆ ಪಡೆದು ಸಮಸ್ಯೆ ನಿವಾರಿಸುವ ಕುರಿತು ಸಭೆ ನಡೆಸಲಾಗಿತ್ತು. ಚುನಾವಣೆ ನೀತಿಸಂಹಿತೆ ಬಂದ ಮೇಲೆ ಆ ಕೆಲಸ ನಿಂತುಹೋಗಿದೆ.
ನೀತಿಸಂಹಿತೆ ಅನ್ವಯವಿಲ್ಲ: ಕುಡಿವ ನೀರು ಪೂರೈಕೆಗೆ ನೀತಿಸಂಹಿತೆ ಅನ್ವಯಿಸುವುದಿಲ್ಲ. ಅಧಿಕಾರಿಗಳು ನೀತಿಸಂಹಿತೆ ದೊಡ್ಡ ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನ ಪ್ರತಿನಿಧಿಗಳಿಗಿರುವ ಕಾಳಜಿ, ಬದ್ಧತೆ ಅಧಿಕಾರಿಗಳಿಗೆ ಇರುವುದಿಲ್ಲ. ಯಾವ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸಮಾಡುತ್ತಿಲ್ಲ ಎಂದು ಶಾಸಕರು ಟೀಕಿಸಿದರು.
ನೀರಿನ ಮೂಲ ಕಡಿಮೆ: ನೀತಿಸಂಹಿತೆ ಮೇ 16 ರವರೆಗೆ ಜಾರಿಯಲ್ಲಿರುತ್ತದೆ. ಸದ್ಯ ದಿನಕಳೆದಂತೆ ನೀರಿನ ಭೀಕರತೆ ಎದುರಾಗುತ್ತಿದೆ. ಅಲ್ಲದೆ, ಬಾವಿ, ಬೋರ್ವೆಲ್ಗಳಲ್ಲಿ ನೀರಿನ ಮೂಲ ಕಡಿಮೆಯಾಗತೊಡಗಿದೆ. ಕಳೆದ ಸಾಲಿನಲ್ಲಿ 50ಗ್ರಾಮಗಳಲ್ಲಿ ಟ್ಯಾಂಕರ್ನಿಂದ ನೀರು ಪೂರೈಸಲಾಗಿದೆ. ಈ ಬಾರಿಯೂ ಅಗತ್ಯವಿರುವ ಕಡೆ ಜಿಲ್ಲಾಡಳಿತ ನೀರು ಟ್ಯಾಂಕರ್ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.
ಸಮಸ್ಯೆ ಉಂಟಾದಾಗ ಜನ ಪ್ರತಿನಿಧಿಗಳನ್ನೇ ಸಾರ್ವಜನಿಕರು ಬೊಟ್ಟುಮಾಡುತ್ತಾರೆ. ಚುನಾವಣೆ ಮುಗಿದಿದೆ, ಯಾರ ಪ್ರಭಾವ ಇನ್ಯಾರ ಮೇಲೆ ಬೀರದು. ನೀತಿ ಸಂಹಿತೆ ತೆಗೆದುಹಾಕಿ ಜನರಿಗೆ ಅನುಕೂಲ ಒದಗಿಸಬೇಕು ಎಂದರು.
ದುರಸ್ತಿಗೆ 11 ಲಕ್ಷ ಖರ್ಚು: ಆಳಂದ ಪಟ್ಟಣದಲ್ಲಿ ಐದು ದಿನಕ್ಕೊಮ್ಮೆ ನೀರು ಕೊಡುತ್ತಿರುವುದು ಸಂಪೂರ್ಣವಾಗಿ ಪುರಸಭೆ ಮತ್ತು ಅಧಿಕಾರಿಗಳು ನಿಷ್ಕ್ರಿಯವಾಗಿದ್ದಾರೆ. ಅಧಿಕಾರ ಇಲ್ಲದಿದ್ದಾಗಲೂ ನೀರು ಪೂರೈಸುವ ಅಮರ್ಜಾ ಅಣೆಕಟ್ಟೆಗೆ ಪೂಜೆಮಾಡಿ ಬರುವವರು ಈಗೆಕೆ ಜನರಿಗೆ ನೀರು ಕೊಡುತ್ತಿಲ್ಲ ಎಂದು ಶಾಸಕರು ಪ್ರಶ್ನಿಸಿದರು. ಪಂಪ್ಸೆಟ್ ದುರಸ್ತಿ ಹೆಸರಿನಲ್ಲಿ 11 ಲಕ್ಷ ಖರ್ಚು ಹಾಕಿ ಲೂಟಿಮಾಡಿದ್ದಾರೆ. ಹೊಸ ಪಂಪ್ ಖರೀದಿಗೆ 32 ಲಕ್ಷ ಹಣ ಕಟ್ಟಿದ್ದಾರೆ. ಆದರೆ ಸಮಯಕ್ಕೆ ಹಣ ಕಟ್ಟದೆ ಇರುವುದು ವಿಳಂಬಕ್ಕೆ ಕಾರಣ. ಈ ಕುರಿತು ಕರ್ನಾಟಕ ಜಲ ಮಂಡಳಿ ಮೂಲಕ ಟೆಂಡರ್ ಕರೆಯದೆ ನೆರವಾಗಿ ಪುರಸಭೆಯಿಂದಲೇ ಕರೆದರೆ ತುರ್ತು ಕೆಲಸವಾಗುತ್ತಿತ್ತು. ಇನ್ನೂ ಪಂಪ್ ಅಳವಡಿಸಲು ಜುಲೈ ತಿಂಗಳು ಬೇಕಾಗುತ್ತದೆ ಎನ್ನುತ್ತಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆ. ಜಿಲ್ಲಾಧಿಕಾರಿ ಪುರಸಭೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ಕೈಗೊಂಡು ತುರ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಸದಸ್ಯ ಜಾಕೀರ ಲಾಡಕಾ, ಹಿಂದುಳಿದ ವರ್ಗದ ಅಧ್ಯಕ್ಷ ಮಲ್ಲಿನಾಥ ಪರೇಣಿ, ಪಂಡಿತ ಶೇರಿಕಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement