ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸದೃಢ ದೇಶಕ್ಕಾಗಿ ವಿದ್ಯಾರ್ಥಿಗಳ ಕೊಡುಗೆ ಅಗತ್ಯ: ಪ್ರೊ. ಪಾಗಾ

Rashmi Kasaragodu
Updated On : 25 Apr 2014, 10:44 am

ಆಳಂದ: ಸದೃಢ ದೇಶವನ್ನು ಕಟ್ಟಲು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಾತ್ರ ಬಹುಮುಖ್ಯವಾಗಿದೆ. ಆ ದಿಶೆಯಲ್ಲಿ ಎನ್ಎಸ್ಎಸ್ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜ ಕಾರ್ಯದಲ್ಲಿ ತೊಡಗಬೇಕು ಎಂದು ಪ್ರಾಚಾರ್ಯ ಪ್ರೊ. ಎಸ್.ಎಸ್. ಪಾಗಾ ಕರೆ ನೀಡಿದರು.
ತಾಲೂಕಿನ ಹೊನ್ನಳ್ಳಿಯ ಯಲ್ಲಯ್ಮದೇವಿ ದೇವಸ್ಥಾನ ಆವರಣದಲ್ಲಿ ನಡೆದ ಎಚ್ಕೆಇ ಪ್ರತಿಷ್ಠಿತ ಎ.ವಿ. ಪಾಟೀಲ್ ಪದವಿ ಮಹಾವಿದ್ಯಾಲಯದ ವಿಶೇಷ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಾಹಿತಿ ಡಾ. ಪ್ರಭು ಖಾನಾಪೂರೆ, ಮೂಢನಂಬಿಕೆ, ಕಂದಾಚಾರಗಳಿಂದ ಹೊರಬಂದು ಜೀವನದಲ್ಲಿ ಹೊಸತನ ಮೈಗೂಡಿಸಿಕೊಳ್ಳಬೇಕು ಎಂದರು.
ಸಿ.ಬಿ. ಪಾಟೀಲ್ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಸ್.ಎಚ್. ಹೊಸ್ಮನಿ, ನಿವೃತ್ತ ಪ್ರಾಚಾರ್ಯ ಡಿ.ಸಿ. ಗಡಗಡೆ, ಗ್ರಂಥಪಾಲಕ ಕಮಲಾಕರ್ ಯಲಕಪಳ್ಳಿ, ಯೋಜನಾಧಿಕಾರಿ ಎಸ್.ಎಸ್. ಹಿರೇಮಠ ಮಾತನಾಡಿದರು.
ವಿದ್ಯಾರ್ಥಿನಿ ಗೌರಮ್ಮ ಎಸ್. ಪಾಟೀಲ್ ಹೊಸಳ್ಳಿ ಮತ್ತು ಬಸವರಾಜ ಶೃಂಗೇರಿ ಶಿಬಿರದ ಅನಿಸಿಕೆ ವ್ಯಕ್ತಪಡಿಸಿದರು.
ಪ್ರೊ. ಎಸ್.ಡಿ. ಬರ್ದಿ, ಎಂ.ಎಂ. ಬೋನಾಳ, ಶರಣಬಸಪ್ಪ ಕಮ್ಮಾರ, ಪ್ರೊ. ಎಸ್.ಎಸ್. ಕಟ್ಟಿ, ಡಾ. ಬಸವರಾಜ ಹಿರೇಮಠ, ಪ್ರಸನ್ನ ಜವಳಿ, ಬಿ.ಎಸ್. ಕಾಗೆ ಸೇರಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಇದ್ದರು. ಶಾಂಭವಿ ಜಮಾದಾರ ಸ್ವಾಗತಿಸಿದರು. ಸುಧೀರ ಪಡಶೆಟ್ಟಿ ನಿರೂಪಿಸಿದರು. ಸುಭಾಷ ಪೂಜಾರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement