ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜೆಸ್ಕಾಂ ಅಧಿಕಾರಿ ಸ್ಪಂದಿಸಿಲ್ಲ: ಆರೋಪ

Rashmi Kasaragodu
Updated On : 26 Apr 2014, 12:12 pm

ಶಹಾಪುರ: ಪಟ್ಟಣದ ಜೆಸ್ಕಾಂ ಕಚೇರಿಯ ಕಾರ್ಯನಿರ್ವಾಹಕ ಅಭಿಯಂತರರು(ಎಇಇ) ಸಾಮಾನ್ಯ ದೂರು ನೀಡಲು ಹೋದವರಿಗೆ ಸ್ಪಂದಿಸಿಲ್ಲ ಎಂದು ವಾರ್ಡ ನಂ. 6ರ ಸದಸ್ಯೆ ಲಲಿತಾ ಮಹಾದೇವಯ್ಯ ಸ್ವಾಮಿ ಆರೋಪಿಸಿದ್ದಾರೆ.      ವಿದ್ಯುತ್ ಕಡಿತ ಮತ್ತು ಸಮರ್ಪಕ ವಿದ್ಯತ್ ಪೂರೈಕೆ ಬಗ್ಗೆ, ವಾರ್ಡನಲ್ಲಿನ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಜೆಸ್ಕಾಂಗೆ ತೆರಳಿದ್ದಾಗ ಸಂಬಂಧಿಸಿದ ಅಧಿಕಾರಿ ನಿಷ್ಕಾಳಜಿಯಿಂದ ಮಾತನಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಾರ್ವತ್ರಿಕ ಕ್ಷೇತ್ರದಲ್ಲಿ ಕರ್ತವ್ಯ ಪಾಲನೆ ಮಾಡಬೇಕಾದ ಅಧಿಕಾರಿಗಳು ಕಚೇರಿಗೆ ಬಂದವರ ಬಗ್ಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಬೇಜವಾಬ್ದಾರಿತನ ಮೆರೆದಿದ್ದಾರೆ ಎಂದು ಪುರಸಭೆ ಸದಸ್ಯೆಯ ಪತಿ ಮಹಾದೇವಯ್ಯ ಸ್ವಾಮಿ ದೂರಿದ್ದಾರೆ.
ನಾಳೆ ಬಾಬೂಜಿ
ವೃತ್ತ ಉದ್ಘಾಟನೆ
ಯಾದಗಿರಿ: ಸುರಪುರ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಗ್ರಾಮ ಶಾಖೆಯಿಂದ ಏ. 27ರಂದು ಬೆಳಿಗ್ಗೆ ಬಾಬು ಜಗಜೀವನರಾಮ್ ವೃತ್ತ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕರಡಕಲ್ ಪೀಠಾಧಿಪತಿ ಶಾಂತರುದ್ರಮುನಿ ಸ್ವಾಮಿ  ಸಾನ್ನಿಧ್ಯ ವಹಿಸುವರು. ಸಮಿತಿ ಜಿಲ್ಲಾಧ್ಯಕ್ಷ ಶಾಂತಪ್ಪ ಖಾನಳ್ಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement