ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೊತ್ತಲ ಬಸವೇಶ್ವರ ರಥೋತ್ಸವ

Rashmi Kasaragodu
Updated On : 28 Apr 2014, 12:05 pm

ಸೇಡಂ: ಇಂದು ಬೆಳಗಿನ ಜಾವ ಕೊತ್ತಲ ಬಸವೇಶ್ವರ ಉಚಾಯಿ ಮೆರವಣಿಗೆ ನಡೆಯಿತು.
ಬೆಳಗ್ಗೆ 8.5 ಕ್ಕೆ ಅಗ್ನಿ ಪ್ರವೇಶ, ಸಂಜೆ 4ಕ್ಕೆ ವಿಶ್ವಲಿಂಗ ವಿಷ್ಣು ಆಶ್ರಮದಿಂದ ನಂದಿಕೋಲು ಮೆರವಣಿಗೆ ನಡೆಯಿತು. 5.45ಕ್ಕೆ ವೀರಸಂಗಪ್ಪ ತಡಕಲ್ ಪರಿವಾರದಿಂದ ಕಳಸ ಏರಿಸುವ ಕಾರ್ಯಕ್ರಮ, ನಂತರ ಕೊತ್ತಲ ಬಸವೇಶ್ವರ ರಥೋತ್ಸವ ನಡೆಯಿತು. ದೇವಾಲಯದ ಸದಾಶಿವ ಮಹಾಸ್ವಾಮಿ ನೇತೃತ್ವದಲ್ಲಿ ಸಕಲ ಕಾರ್ಯಗಳು ನಡೆದವು. ಸಂಜೆ 6.5ಕ್ಕೆ ಆರಂಭಗೊಳ್ಳಬೇಕಾದ ರಥೋತ್ಸವವು ವರುಣನ ಅಬ್ಬರವನ್ನು ಮನಗಂಡ ದೇವಸ್ಥಾನ ಸಮಿತಿಯವರು 15 ನಿಮಿಷ ಮುಂಚಿತವಾಗಿಯೇ ರಥೋತ್ಸವವನ್ನು ನಡೆಸಿದರು. ರಾತ್ರಿ 9.5ಕ್ಕೆ ಕಲಾವಿದರಿಂದ ಗೀಗೀ ಪದ ಕಾರ್ಯಕ್ರಮ ನಡೆಯಿತು. ಪಟ್ಟಣವಲ್ಲದೆ ತಾಲೂಕಿನ ಎಲ್ಲೆಡೆಯಿಂದ ಬಂದ ಭಕ್ತ ಸಮೂಹ ಜೈ ಘೋಷ ರಥೋತ್ಸವ ಯಶಸ್ವಿಗೊಳಿಸಿತು. ರವಿವಾರ ಸಂಜೆ 6.5ಕ್ಕೆ ದೇವಾಲಯದ ಆವರಣದಲ್ಲಿ ಧರ್ಮ ಸಭೆ ನಡೆಯಲಿದೆ. ಸಭೆಯಲ್ಲಿ ಹುಲಸೂರ ಗುರುಬಸವೇಶ್ವರ ಸಂಸ್ಥಾನದ ಶಿವಾನಂದ ಶ್ರೀ ಸಾನಿಧ್ಯ ವಹಿಸಿದ್ದರು. ಸೊನ್ನ ದಾಸೋಹ ಮಠದ ಡಾ. ಶಿವಾನಂದ ಶ್ರೀ, ಹಾವಗಿ ಲಿಂಗೇಶ್ವರ ಮಠದ ಶಾಂತಲಿಂಗ ಶಿವಾಚಾರ್ಯ ಶ್ರೀಗಳಿಂದ ಶುಭನುಡಿ, ಹಾಲಪಯ್ಯ ಮಠದ ಪಂಚಾಕ್ಷರಿ ಶ್ರೀ ಸಮ್ಮುಖ, ಶಿವಶಂಕರ ಮಠದ ಶಿವಶಂಕರ ಸ್ವಾಮಿಗಳು ಅಧ್ಯಕ್ಷತೆ ವಹಿಲಿದ್ದಾರೆ ಎಂದರು. ಧರ್ಮ ಸಭೆ ಮುಕ್ತಾಯಗೊಂಡ ನಂತರ ಗುಂಡಣ್ಣ ಡಿಗ್ಗಿ, ರಾಚಯ್ಯ ಸ್ವಾಮಿ ಖಾನಾಪುರ ಕಲಾವಿದರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಾದ ಅಬ್ಬೆಪಾರಿಗಳ ಹಾವಳಿ: ಜಾತ್ರೆಯಲ್ಲಿ ಭಾಗವಹಿಸುವ ಹೆಣ್ಣು ಮಕ್ಕಳನ್ನು ಪಿಡಿಸುವ ಅಬ್ಬೆಪಾರಿಗಳು ಅಲ್ಲಲ್ಲಿ ಕಂಡು ಬಂದರು, ಬಸವ ಜಯಂತಿವರೆಗೂ ಜಾತ್ರೋತ್ಸವ ನಡೆಯಲಿದ್ದು, ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸುವುದು, ಅಬ್ಬೆಪಾರಿಗಳ ಹಾವಳಿ ತಡೆಯುವುದು ಅವಶ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement