ಜೆಸ್ಕಾಂ ಅಧಿಕಾರಿಗಳಿಂದ ಹಣ ವಸೂಲಿ; ಕ್ರಮಕ್ಕೆ ಆಗ್ರಹ
ಯಾದಗಿರಿ: ತಾಲೂಕಿನ ಹತ್ತಿಕುಣಿ ಮತ್ತು ಮೈಲಾಪುರ ಜೆಸ್ಕಾಂ ಶಾಖೆಯ ಅಧಿಕಾರಿಗಳು ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕನ್ನಡ ಸೇನೆ ಕರ್ನಾಟಕ ಯುವ ಘಟಕದಿಂದ ಜೆಸ್ಕಾ ಶಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಮನವಿ ಸಲ್ಲಿಸಿದರು.
ಹತ್ತಿಕುಣಿ ಮತ್ತು ಮೈಲಾಪೂರ ಶಾಖೆಯ ಶಾಖಾಧಿಕಾರಿಗಳು ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾದ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಮತ್ತು ಟಿಸಿ ಅಳವಡಿಸಲು ಫಲಾನುಭವಿಗಳಿಂದ ಹಣ ಪಡೆಯುತ್ತಿದ್ದಾರೆ. ರೈತರಿಂದ ಹಣ ಕೊಳ್ಳೆ ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಹಣ ವಸೂಲಿ ಮಾಡುತ್ತಿರುವ ಶಾಖಾಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಬಡ ರೈತರಿಗೆ ಜಮೀನಿನಲ್ಲಿ ಟಿಸಿ ಅಳವಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ನೀಡುವಂತೆ ಮನವಿ ಮಾಡಿದ್ದಾರೆ. ವಿಳಂಬವಾದಲ್ಲಿ ಜೆಸ್ಕಾಂ ಕಚೇರಿ ಮುಂದೆ ಧರಣಿಗೆ ಎಚ್ಚರಿಸಿದ್ದಾರೆ. ಈ ವೇಳೆ ಜಿಲ್ಲಾಧ್ಯಕ್ಷ ಶೇಖರ ಮುಂಡ್ರಿಕೇರಿ, ಸಿದ್ದಲಿಂಗರೆಡ್ಡಿ, ಆನಂದ, ಸಂತೋಷಕುಮಾರ, ವಿಜಯಕುಮಾರ, ಬೋಜರಾಜ, ಮಂಜುನಾಥ, ಬನಶಂಕರ್, ಪ್ರಕಾಶ, ಕಾಶಪ್ಪ ಇತರರಿದ್ದರು.