ಬೇಕಿದೆ ಶಾಶ್ವತ ಪರಿಹಾರ
ಆಳಂದ: ಪ್ರತಿ ವರ್ಷ ಬೇಸಿಗೆ ಬಂದರೆ ಸಾಕು, ತಾಲೂಕಿನ 120 ಹಳ್ಳಿಗಳ ಪೈಕಿ ಬಹುತೇಕ 80 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಪ್ಪಿದ್ದಲ್ಲ. ಸ್ವಾತಂತ್ರ್ಯ ದೊರೆತು 65 ವರ್ಷ ಗತಿಸಿದರೂ ಗ್ರಾಮೀಣ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಆಡಳಿತಕ್ಕೆ ಸಾಧ್ಯವಾಗಿಲ್ಲ. ವರ್ಷ ಕಳೆದಂತೆ ಒಂದಡೆ ಸಮಸ್ಯೆ ಉದ್ಭವಿಸಿದರೆ ಮತ್ತೊಂದಡೆ ನಿವಾರಣೆಯೂ ಆಗಿರುಗುತ್ತಿದೆ. ಆದರೆ ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಜಿಪಂ ಸಹಯೋಗದ ಅನುದಾನದಡಿ ತೋಡಿದ ತೆರೆದಬಾವಿ, ಕೊಳವೆಬಾವಿಗಳಿಂದ ಕೆಲವು ಹಳ್ಳಿಗಳಲ್ಲಿ ಕೊಂಚ ನೀರಿನ ಸಮಸ್ಯೆ ನಿವಾರಣೆಯೂ ಆಗಿದೆ ಎನ್ನುತ್ತಾರೆ ಸಾರ್ವಜನಿಕರು.
ಸಮಸ್ಯೆಗೆ ಕಾರಣವೇನು?: ಇನ್ನೂ ಹಲವು ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಕುಸಿದು ನೀರಿನ ಮಟ್ಟ, ನಿರ್ವಹಣೆಯಲ್ಲಿ ಲೋಪದೋಷ ಹಾಗೂ ಕೈಕೊಡುವ ವಿದ್ಯುತ್‌ನಿಂದಾಗಿ ಇನ್ನೂ ಭೀಕರ ಸಮಸ್ಯೆಯೂ ಎದುರಿಸುವಂತಾಗಿದೆ.ಇದಕ್ಕಾಗಿ ಶಾಸಕ ಬಿ.ಆರ್. ಪಾಟೀಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀರು ಪೂರೈಕೆಗಾಗಿ ಕ್ರಿಯಾಯೋಜನೆ ರೂಪಿಸಿ ಜಿಲ್ಲೆಯ ಡಿಸಿಗೆ ಕಳುಹಿಸಿಕೊಡಲಾಗಿದೆ.