ಇಂದು ಕಾನೂನು ಅರಿವು ಕಾರ್ಯಾಗಾರ
ಯಾದಗಿರಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಕಾರ್ಯಾಗಾರವನ್ನು ಏ. 29ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಿದ್ಯಾವತಿ ಎಸ್.ಅಕ್ಕಿ ಅವರು ಉದ್ಫಾಟಿಸುವರು. ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ ಉಪಸ್ಥಿತರಿರುವರು. ಸಂಪಲ್ಮೂಲ ವ್ಯಕ್ತಿಗಳಾಗಿ ಗುಲ್ಬರ್ಗ ಎಮ್.ಆರ್. ಮೆಡಿಕಲ್ ಕಾಲೇಜು ಪ್ರಾಧ್ಯಾಪಕಿ ಸಂಗೀತಾ ಪಾಟೀಲ್, ಅರ್ಚನಾ ಕೊಡ್ಲಿ, ಗುಲ್ಬರ್ಗದ ವಿಧಿವಿಜ್ಞಾನ ವಿಭಾಗ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿ ಪ್ರವೀಣ ಉ. ಸಂಗನಾಳಮಠ ಹಾಗೂ ವೈಜ್ಞಾನಿಕ ಸಹಾಯಕ ಡಾ. ಅರವಿಂದ ಅತಿಥಿಗಳಾಗಿ ಉಪಸ್ಥಿತರಿರುವರು.