ಕೆಂಗೇರಿ ಬಡಾವಣೆಗೆ ವೈದ್ಯರ ತಂಡ ಭೇಟಿ
ಕೆಂಭಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಎಸ್.ಟಿ.ತಳವಾರ ನೇತೃತ್ವದ ತಂಡ ಸೋಮವಾರ ಪಟ್ಟಣದ ಕೆಂಗೇರಿ ಬಡಾವಣೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪರಿಶೀಲಿಸಿತು.
ನಂತರ ಮಾತನಾಡಿದ ಅಧಿಕಾರಿಗಳು ಈ ಬಡಾವಣೆಯಲ್ಲಿ 150 ಜನಸಂಖ್ಯೆ ಇದ್ದು, ಇದರಲ್ಲಿ ಸುಮಾರು 30 ಮಕ್ಕಳಿದ್ದಾರೆ. ಈ ಪೈಕಿ 1ರಿಂದ 4 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಈ ಮಕ್ಕಳಿಗೆ ಇಂದಿನಿಂದಲೇ ಅಂಗನವಾಡಿ ಕೇಂದ್ರದಿಂದ ಹಾಲು ಮತ್ತು ಪೌಷ್ಟಿಕ ಆಹಾರ ವಿತರಿಸಲಾಗುವುದು ಮತ್ತು ಈ ಬಡಾವಣೆಯಲ್ಲಿ ಬುಧವಾರ ತಾಯಂದಿರ ಸಭೆಯನ್ನು ಕರೆದು ಮಕ್ಕಳ ಆರೋಗ್ಯ ರಕ್ಷಣೆಯ ಬಗ್ಗೆ ಆರೋಗ್ಯ ಪೌಷ್ಟಿಕ ಶಿಬಿರವನ್ನು ನಡೆಸಲಾಗುವುದು ಎಂದು ಹೇಳಿದರು.
ತಾಯಿ ಆಸ್ಪತ್ರೆಯಲ್ಲಿ ಇರುವವರೆಗೆ ದಿನಕ್ಕೆ ನೂರು ರೂಪಾಯಿಂತೆ ದಿನ ಭತ್ಯೆ ಕೊಡಲಾಗುವುದು ಮತ್ತು ಉಚಿತ ಚಿಕಿತ್ಸೆ ನೀಡಲಾಗುವುದು. ಈ ಪ್ರಕಾರದ ಪ್ರಕರಣಗಳು ಮುಂದೆ ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಶಿಶು ಅಭಿವೃದ್ಧಿ ಅಧಿಕಾರಿ ದೇನುಸಿಂಗ ಚವಾಣ, ಡಾ.ಶಂಕರಗೌಡ ಮೂಲಿಮನಿ, ಮೇಲ್ವಿಚಾರಕಿ ಪಾರ್ವತಿ, ಅಂಗನವಾಡಿ ಶಿಕ್ಷಕಿಯರಾದ ಸುರೇಖಾ ಕುಲಕರ್ಣಿ, ಜಯಶ್ರೀ, ಕವಿತಾ ಇದ್ದರು