ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೃಷ್ಣೆ ದಡದಲ್ಲಿ ಕಂಗೊಳಿಸುತ್ತಿರುವ ಮೌನೇಶ್ವರ

Mainashree
Updated On : 4 Aug 2014, 10:07 am

ಯಾದಗಿರಿ: ಬಸವಸಾಗರದಿಂದ ಕೃಷ್ಣಾನದಿಗೆ ಅಧಿಕ ನೀರು ಹರಿಬಿಟ್ಟಿದ್ದರೂ ಸಮೀಪದ ತಿಂಥಣಿ ಮೌನೇಶ್ವರ ದೇವಾಲಯದ ಬಳಿ ಗಂಗಾಮಾತೆ ಶಾಂತವಾಗಿ ಹರಿಯುತ್ತಿದ್ದಾಳೆ. ಹಸಿರು ವನಲಿನಿಂದ ಕೂಡಿದ ನಿಸರ್ಗದ ಮಧ್ಯೆ ದೇವಾಲಯ ನೋಡುಗರಿಗೆ ಕಂಗೊಳಿಸುತ್ತದೆ. ನದಿ ದಾಟಿ ಹೋಗುವ ಸ್ಥಿತಿಯಿಲ್ಲ ಕಾರಣ ಎಡದಂಡೆಯಲ್ಲಿ ನಿಂತು ನೋಡಿದರೆ ಮೂರ್ತಿಯು ಸಾಕ್ಷತ್ ಮೌನೇಶ್ವರ ಕುಳಿತಿದ್ದಾನೆ ಎನ್ನುವಂತೆ ಕಾಣಿತ್ತಿದೆ. ಮೈದುಂಬಿ ಹರಿಯುವ ಕೃಷ್ಣಾನದಿಗೆ ಅನೇಕ ಜನರು ಬಂದು ಕಣ್ತುಂಬ ನೋಡಿ ತೀರ್ಥ ಸ್ನಾನ ಮಾಡಿ ನಂತರ ಮೌನೇಶ್ವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ತುಂಬಿ ಹರಿಯುತ್ತಿರುವ ಕೃಷ್ಣೆ ಹಾಗೂ ಮೌನೇಶ್ವರ ದೇವಾಲಯವನ್ನು ಕಣ್ದುಂಬಿಕೊಳ್ಳಲು ನಾರಾಯಣಪುರ, ಲಿಂಗಸ್ಗೂರು, ಸುರಪುರ, ದೇವದುರ್ಗ ಸೇರಿದಂತೆ ಸುತ್ತಮುತ್ತಲಿನ ಅನೇಕ ಜನ ಪ್ರವಾಸಿಗರು ಬರುತ್ತಿದ್ದಾರೆ.
ಇಲ್ಲಿ ನಿತ್ಯವೂ ಜಾತ್ರೆ: ಇನ್ನು ದೇವಾಲಯದ ಎದುರು ಪಳಾರ ಸೇರಿದಂತೆ ನಾನಾ ಅಂಗಡಿಗಳು ಹಾಕಿದ್ದರಿಂದ ಬಂದ ಭಕ್ತರು ಪಳಾರ, ಇನ್ನಿತರ ತಿಂಡಿಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಸಂದು ಗೊಂದಲ ಇಲ್ಲದೆ ನಿತ್ಯ ಇಲ್ಲಿ ಸರಳ ಜಾತ್ರೆಯಾಗಿದೆ. ಮೌನೇಶ್ವರನ ಶಿಷ್ಯ ಗಂಗಪ್ಪಯ್ಯನಿಗೆ ಅಂಗದಲ್ಲಿ ಪರಮಾತ್ನನನ್ನು ತೋರಿಸಿದ್ದ ಪವಾಡ ದೃಶ್ಯ, ಶಾಂತ ತಾಣ ಕೈಲಾಸ ಕಟ್ಟೆಯನ್ನು ಇಲ್ಲಿ ನೋಡಬಹುದು. ಕೋಣನ ಗವಿಯೂ ಇಲ್ಲಿದೆ. ಹೀಗಾಗಿ ದಕ್ಷಿಣ ಕಾಶಿ ಎಂದೇ ಹೆಸರಾದ ಸುಕ್ಷೇತ್ರ ತಿಂಥಣಿ ಕೃಷ್ಣೆಯ ಪ್ರಕೃತಿ ಸೌಂದರ್ಯ ಸವಿಯಲು ಸದ್ಯ ಎರಡು ಕಣ್ಣುಗಳು ಸಾಲದೇನೋ ಎನಿಸುತ್ತಿದೆ. ರಾಜ್ಯ ಹೆದ್ದಾರಿ ಶಾಂತಪುರ ಮೌನೇಶ್ವರ ವೃತ್ತದ ಬಳಿ ಕ್ರಾಸ್‌ಗೆ ಇಳಿದು ಸುಕ್ಷೇತ್ರ ತಿಂಥಣಿಗೆ ಬರಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement