ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಘೇರಾವ್

Mainashree
Updated On : 4 Aug 2014, 10:07 am

ಯಾದಗಿರಿ: ಶಹಾಪುರ ತಾಲೂಕಿನ ಕಾಲುವೆ ಕೊನೆಭಾಗದ ಗ್ರಾಮಗಳಾದ ವಡಗೇರಾ, ಉಳ್ಳೆಸುಗೂರ, ಕುರುಕುಂದಾ, ಕಾಡಂಗೇರಾ, ತೇಕರಾಳ ಇನ್ನೂ ಮುಂತಾದ ಗ್ರಾಮಗಳ ನೂರಾರು ರೈತರು ವಡಗೇರಾ ಕೆಬಿಜೆಎನ್ನೆಲ್ ಅಧಿಕಾರಿಗಳ ವಾಹನಕ್ಕೆ ಘೇರಾವ್ ಹಾಕಿ ಪ್ರತಿಭಟಿಸಿದರು.
ಈಗಾಗಲೇ ಕಾಲುವೆಗೆ ನೀರು ಹರಿಸಲು ಕೆಬಿಜೆಎನ್ನೆಲ್ ಸಜ್ಜಾಗಿದೆ. ಉಪಕಾಲುವೆಗಳು ಜಾಲಿಗಿಡಗಳಿಂದ, ಹೂಳಿನಿಂದ ಆವೃತವಾಗಿದ್ದು, ಸಂಪೂರ್ಣ ಹಾಳಾಗಿವೆ. ಆದರೂ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊದಲೇ ಮುಂಗಾರು ಕೈಕೊಟ್ಟಿದೆ. ರೈತರು ಕಂಗೆಟ್ಟಿದ್ದಾರೆ. ಇರುವ ಕಾಲುವೆಗಳ ನೀರು ಸದ್ಬಳಕೆ ಮಾಡಿಕೊಳ್ಳಬೇಕೆಂದರೆ ಉಪಕಾಲುವೆಗಳು ಸಂಪೂರ್ಣ ಹಾಳಾಗಿವೆ. ಈಗಾಗಲೇ ಸರ್ಕಾರ 500 ಕೋಟಿ ಖರ್ಚು ಮಾಡಿ ಕಾಲುವೆ ನವೀಕರಣಗೊಳಿಸಲಾಗಿದೆ. ಕಾಲುವೆಗೆ ಸರಾಗವಾಗಿ ನೀರು ಹರಿಯುವ ಭರವಸೆಯನ್ನು ರೈತರು ಹೊಂದಿದ್ದಾರೆ. ಆದರೆ ಉಪ ಕಾಲುವೆಗಳ ದುರಸ್ತಿ ಮಾಡದ ಕಾರಣ ನೀರು ಪೋಲಾಗುವ ಸಾಧ್ಯತೆಯಿದೆ ಎಂದು ಕಿಡಿಕಾರಿದರು.
ಅಧಿಕಾರಿಗಳಿಗೆ ತರಾಟೆ: ಬಿಡಿ 21ರ ಕುರುಕುಂದ 5 ಕಿಮೀ ಕಾಲುವೆ ಮತ್ತು ರಸ್ತೆ, ಡಿ21ರ ವ್ಯಾಪ್ತಿಯ ತೇಕರಾಳ, ಉಳ್ಳೆಸುಗೂರ, ವಡಗೇರಾ, ಕಂದಳ್ಳಿ, ಹಾಲಗೇರಾ ಇನ್ನೂ ಅನೇಕ ಕಾಲುವೆ ಕೊನೆಭಾಗದ ಉಪ ಕಾಲುವೆಗಳು ಜಾಲಿಗಿಡಗಳಿಂದ ಆವೃತಗೊಂಡಿವೆ. ಕಾಲುವೆಗಳಲ್ಲಿ ಮಣ್ಣು ಹೂಳು ತುಂಬಿ ಹಾಳಾಗಿವೆ ಎಂದು ರೈತರಾದ ಶರಣಬಸಪ್ಪ ಬಿರಾದಾರ್, ಗುರಣ್ಣಗೌಡ ವನಸಾನಿ, ಮರಿಲಿಂಗಪ್ಪ, ಜೈರೆಡ್ಡಿ ಸೇರಿದಂತೆ ಅನೇಕ ರೈತರು ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಇಲಾಖೆಯ ವಡಗೇರಾ ಉಪವಿಭಾಗದ ಎಇಇ ರಾಜಶೇಖರ ರೈತರನ್ನು ಸಮಾಧಾಗೊಳಿಸಿ, ಕಾಲುವೆಗೆ ನೀರು ಬರುವ ವೀಕ್ಷಣೆಗೆ ಆಗಮಿಸಿದ್ದೇನೆ. ಇದರ ಬಗ್ಗೆ ಎಸ್‌ಇ ಮತ್ತು ಸಿಇ ಮೇಲಾಧಿಕಾರಿಗಳ ಗಮನಕ್ಕೆ ತಂದು ಉಪಕಾಲುವೆ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ದುರಸ್ತಿಗೆ ಒತ್ತಾಯ: ಎಸ್‌ಡಿಪಿ ಯೋಜನೆ ಅಡಿಯಲ್ಲಿ ಕುರುಕುಂದಾ- ಬೀರನಕಲ್- ಕೊಪ್ಪುರ ರಸ್ತೆ, ಕುರುಕುಂದಾ- ಐಕೂರ ಕಾಡಾ ರಸ್ತೆಗಳನ್ನು ಕೈಗೆತ್ತಿಕೊಳ್ಳುವಂತೆ ಕಾಂಗ್ರೆಸ್ ಯುವ ಮುಖಂಡ ಹಾಗೂ ನೀರು ಬಳಕೆದಾರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶರಣಬಸಪ್ಪ ಪಾಟೀಲ್ ಬಿರಾದಾರ ಅಧಿಕಾರಿಗಳಿಗೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕೆಬಿಜೆಎನ್ನೆಲ್ ಅಧಿಕಾರಿಗಳು ಕಾಲುವೆಗಳು ಮತ್ತು ರಸ್ತೆಯನ್ನು ಪರಿಶೀಲಿಸಿದರು. ಎಇ ಜಾಕೀರ್ ಮತ್ತು ಸಿಬ್ಬಂದಿ ವರ್ಗ, ರೈತರಾದ ಬಸರೆಡ್ಡಿ, ಸಿದ್ದಿಲಿಂಗರೆಡ್ಡಿ, ಬಸವರಾಜ ಕೋಟ್ನಕಲ್, ಗಂಗಪ್ಪ ಪೂಜಾರಿ, ಮಲ್ಲಪ್ಪ ಪೂಜಾರಿ, ಅಮಾತೆಪ್ಪ, ಮಲ್ಲಿಕಾರ್ಜುನ ಸೇರಿದಂತೆ ನಾನಾ ಗ್ರಾಮಗಳ ರೈತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement