ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಖಮರುಲ್ ಶಾಯರಿಗೆ ಮನಸೋತ ಹೈಕಮಾಂಡ್

Vishwanath S
Updated On : 2 Feb 2014, 12:19 pm

ಗುಲ್ಬರ್ಗ: ಸೋನಿಯಾ ಗಾಂಧಿ ಭಾಗವಹಿಸಿದ್ದ ಸಾರ್ವಜನಿಕ ಸಭೆಯಲ್ಲಿ ವಂದನಾರ್ಪಣೆ ಮಾಡುವಾಗ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹೇಳಿದ ಶಾಯರಿ ಕ್ಷಣಕಾಲ ಸೋನಿಯಾ ಮೊದಲ್ಗೊಂಡು ಎಲ್ಲರ ಮನ ಸೆಳೆಯಿತು.
  ಸೋನಿಯಾ ಮಾತು ಮುಗಿಯುತ್ತಿದ್ದಂತೆಯೇ ಜನರೆಲ್ಲರೂ ಎದ್ದು ನಿಂತು ಗಲಾಟೆ ಶುರುವಾಗುವಷ್ಟರಲ್ಲೇ ಖಮರುಲ್ ಇಸ್ಲಾಂ ಮೈಕಿನ ಬಳಿ ಬಂದು ವಂದನೆಗೂ ಮುನ್ನ ಸೋನಿಯಾರಿಗೊಂದು ಶಾಯರಿ...  ಎಂದಾಗ ಖಮರುಲ್ ಶಾಯರಿ ಶೈಲಿ ಬಲ್ಲವರಾಗಿದ್ದ ಜನರೆಲ್ಲೂರ ಕಿವಿ ನಿಮಿರಿಸಿ ನಿಂತರು.
ಮೈ ಓ ನಹೀಂ ಹೂಂ,
ಜೋ ಸಾಹಿಲ್ ಸಾಹಿಲ್ ಚಲೆ,
ಮಝದಾರೋ ಮೇ ಲೇ ಚಲ್ ಮುಝೆ,
ತೂಫಾನೋಂ ಸೆ ಲಡನೆ ಕಾ ಆದ್ಮಿ ಹೂಂ ಮೈ...
  ನಾನು ಸಮುದ್ರದ ದಡ ಹಿಡಿದು ಸಾಗುವವರ ಪೈಕಿ ಅಲ್ಲ, ಸಮುದ್ರದ ಅಲೆಗಳು, ಬಿರುಗಾಳಿಯಲ್ಲಿ ನನ್ನನ್ನು ಕರೆದೊಯ್ಯಿರಿ, ನಾನು ಅವುಗಳೊಂದಿಗೆ ಸಂಘರ್ಷ ಮಾಡುವ ಹವ್ಯಾಸ ಇರುವವಳು... ಎಂಬರ್ಥವಿರುವ ಸುಂದರ ಶಾಯರಿ ಹೇಳಿದಾಗ ಸೋನಿಯಾಗಾಂಧಿಯವರಂತೂ ಕುಳಿತಲ್ಲಿಂದಲೇ ಖುಷಿಯಿಂದ ಮುಗುಳು ನಗುತ್ತ ಇಸ್ಲಾಂರತ್ತ ಕೈಬೀಸಿದರು.
  ಮೇಡಮ್‌ಗೆ ತಮ್ಮ ಶಾಯರಿ ಹಿಡಿಸಿತು ಎಂಬುದನ್ನರಿತ ಸಚಿವ ಇಸ್ಲಾಂ ತಕ್ಷಣ ತಾವು ಹೇಳಿದ ಶಾಯರಿಯನ್ನೇ ಇಂಗ್ಲಿಷ್‌ಗೆ ಅನುವಾದಿಸಿ ಸೋನಿಯಾ ಗಾಂಧಿಗೆ ಮತ್ತಷ್ಟೂ ಅದರ ಅರ್ಥ, ಗೂಢಾರ್ಥ ಎಲ್ಲವೂ ತಿಳಿಯುವಂತೆ ಮಾಡಿದಾಗಲಂತೂ ಸೋನಿಯಾ ಮತ್ತೊಮ್ಮೆ ಖುಷಿಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement