ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

10000 ನಿಗದಿ ಮಾಡಲು ರೈತ ಮೋರ್ಚಾ ಆಗ್ರಹ

Mainashree
Updated On : 4 Feb 2014, 11:33 am

ಶಹಾಪುರ: ತಾಲೂಕಿನಲ್ಲಿ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಹೋತಪೇಟ, ಮಲ್ಲಿಕಾರ್ಜುನ ಚಿಲ್ಲಾಳ ನಂದರಡ್ಡಿ ದರಿಯಾಪುರ ನೇತೃತ್ವದಲ್ಲಿ ಬಿಜೆಪಿ ಪ್ರಮುಖರ ನಿಯೋಗಮೊಂದು ತಹಸೀಲ್ದಾರ್‌ರನ್ನು ಭೇಟಿಯಾಗಿ ದಿಢೀರನೆ ಶೇಂಗಾ ಧಾರಣಿ ಕುಸಿತದಿಂದ ರೈತರು ಕಂಗಾಲಾಗಿರುವುದನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ಮನವರಿಕೆ ಮಾಡಿದರು.
  7ರಿಂದ 8 ಸಾವಿರ ವರೆಗೆ ತುಟ್ಟಿ ಶೇಂಗಾಬೀಜ ತಂದು ಬಿತ್ತನೆ ಮಾಡಿದ ರೈತರಿಗೆ ಈಗ ಪ್ರತಿ ಕ್ವಿಂಟಾಲಿಗೆ 3 ಸಾವಿರ ಧಾರಣಿ ಕುಸಿದ ಪರಿಣಾಮ 3 ಕ್ವಿಂಟಲ್ ಶೇಂಗಾ ಮಾರಿದರೂ ಬಿತ್ತನೆ ಬೀಜದ ಖರ್ಚು ಬರುವುದಿಲ್ಲ. ಏಕೆಂದರೆ ಶೇಂಗಾ ಖರೀದಿ ಮಾಡುವ ದಲ್ಲಾಳಿಗಳು ಸಾಕಷ್ಟುಜನ ಇದ್ದಾರೆ. ಆದರೆ ರೈತರಿಗೆ ಸೂಕ್ತ ಧಾರಣಿ ನೀಡುವವರು ಯಾರು. ಅದಕ್ಕಾಗಿ ತಕ್ಷಣ ಸರ್ಕಾರ ಪ್ರತಿ ಕ್ವಿಂಟಲ್ ಶೇಂಗಾಕ್ಕೆ 10 ಸಾವಿರ ನಿಗದಿ ಮಾಡಬೇಕೆಂದು ರೈತ ಮೋರ್ಚಾ ಸರ್ಕಾರವನ್ನು ಆಗ್ರಹಿಸಿದೆ.
  ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಲ್ಲಯ್ಯ ನಾಯಕ ವನದುರ್ಗಾ, ಅಶೋಕ ಮಲಾಬಾದಿ, ಬಸವರಾಜ ಅರುಣಿ, ತ್ರೀಶೂಲ ಹವಲ್ದಾರ್, ದೇವಿಂದ್ರಪ್ಪ ಕೊನೇರ, ಶಂಕರ ಬಿ.ಪಟ್ಟಣಶಟ್ಟಿ ಮುದ್ನೂರ, ಶರಣಗೌಡ ಅಣಬಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement