ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಕ್ರಮ ಮದ್ಯ ತಡೆಗೆ ಆಗ್ರಹ

Mainashree
Updated On : 4 Feb 2014, 11:34 am

ಸುರಪುರ: ತಾಲೂಕಿನ ಚಿಕ್ಕನಳ್ಳಿ ಗ್ರಾಮದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಲ್ಲಿ ಅಬಕಾರಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಗ್ರಾಮದ ನೂರಾರು ಜನರು ಆಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ತಹಸೀಲ್ದಾರ್ ಭೇಟಿಯಾಗಿ ಮನವಿ ಸಲ್ಲಿಸಿದರು.
  ಗ್ರಾಮದಲ್ಲಿ ಅಧಿಕೃತವಾಗಿ ಯಾವುದೇ ಮದ್ಯದ ಅಂಗಡಿ ಇರುವುದಿಲ್ಲ. ಆದರೆ ಕೆಲವರು ಕಿರಾಣಿ ಅಂಗಡಿ, ಚಹಾ ಹೋಟೆಲ್, ಪಾನಶಾಪ್‌ಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ದಿನನಿತ್ಯವು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಹೋರಾಟದ ಎಚ್ಚರಿಕೆ: ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಸಮಾಜ ಘಾತುಕ ಶಕ್ತಿಗಳನ್ನು ನಿರ್ಬಂಧಿಸಬೇಕು. ಒಂದು ವೇಳೆ ತಾವು ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಉಗ್ರ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಕುಲಕರ್ಣಿಗೆ ಮನವಿ: ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಫೆ.11 ರಂದು ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಇದ್ದು, ಜಾತ್ರೆಯಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡದಂತೆ ಮುಂಜಾಗ್ರತೆ ವಹಿಸಬೇಕು. ಮುಂದಿನ ದಿನಗಳಲ್ಲಿ ಚಿಕ್ಕನಳ್ಳಿ ಗ್ರಾಮ ಸಂಪೂರ್ಣ ಮದ್ಯ ಮುಕ್ತ ಗ್ರಾಮ ಎಂದು ಕರೆಯಿಸಿಕೊಳ್ಳುವಂತೆ ತಾವು ಆಡಳಿತಾತ್ಮಕ ಆದೇಶ ಮಾಡಿ ಗ್ರಾಮದ ಶಾಂತಿ, ಜನರ ಆರೋಗ್ಯ ಕಾಪಾಡಬೇಕೆಂದು ಗ್ರಾಮಸ್ಥರು ತಹಸೀಲ್ದಾರ್ ಅರುಣುಕುಮಾರ ಕುಲಕರ್ಣಿಗೆ ಮನವಿ ಸಲ್ಲಿಸಿದರು.
  ಗ್ರಾಮದ ಪ್ರಮುಖರಾದ ಮಲ್ಲಪ್ಪ ಬೆನಕನಹಳ್ಳಿ, ಪರಶುರಾಮ ಹುಲಕಲ್, ಸಂಜೀವ ಕಟ್ಟಿಮನಿ, ಯಲ್ಲಾಲಿಂಗ ಮಾಲಿಪಾಟೀಲ್, ಮಾಳಿಂಗರಾಯ, ರಂಗನಾಥ ಕಟ್ಟಿಮನಿ, ಯಲ್ಲಪ್ಪ ಕಟ್ಟಿಮನಿ, ಪರುಶುರಾಮ ಕೋಳೂರು, ಯಲ್ಲಪ್ಪ ಹಳ್ಳಿ, ಯಲ್ಲಪ್ಪ ಸಂಗವಾರ್, ಸುರೇಶ ವಂದಲ್, ತಿರುಪತಿ ಸಗರ, ಶಬ್ಬೀರ್ ಪೀರಾಪುರ, ಯಲ್ಲಪ್ಪ ಸಂಗವಾರ್, ಪರಮಣ್ಣ ಕಟ್ಟಿಮನಿ, ಉಮೇಶ ವಂದಲ್, ರೇವಣಸಿದ್ದಪ್ಪ ಹಿರೇಮಠ, ನಂದಪ್ಪ ಬಿರಾದಾರ್, ಮಲ್ಲಪ್ಪ ಸಂಗವಾರ್, ಬಸಪ್ಪ ಅಂಗಡಿ ಹಲವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement