ಯೋಜನೆಗಳ ಸದುಪಯೋಗಕ್ಕೆ ಮಧ್ಯವರ್ತಿಗಳ ಹಿಂಬಾಲಿಸಬೇಡಿ
ಶಹಾಪುರ: ಸರ್ಕಾರ ಗ್ರಾಮೀಣ ಪ್ರದೇಶದ ಬಡ ದುರ್ಬಲರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದುಪಯೋಗಕ್ಕಾಗಿ ನೇರವಾಗಿ ಕಚೇರಿಗೆ ಸಂಪರ್ಕಿಸಿ ಮಧ್ಯವರ್ತಿಗಳನ್ನು ಹಿಂಬಾಲಿಸಿದರೆ ಅನಾನುಕೂಲವೇ ಹೆಚ್ಚು ಎಂದು ತಹಸೀಲ್ದಾರ್ ಪಾಟೀಲ್ ತಿಳಿಸಿದರು.
ಮಂಡಗಳ್ಳಿಯಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿರ್ಗತಿಕ ವಿಧವೆಯರ ಮಾಶಾಸನ, ಸಂದ್ಯಾ ಸುರಕ್ಷಾ ವೃದ್ಯಾಪ್ಯ ವೇತನ, ಅಲ್ಲದೆ ಬಡ ಕುಟುಂಬ ವರ್ಗದಲ್ಲಿ ಮನೆಯ ಯಜಮಾನ ಮೃತಪಟ್ಟರೆ ಶವ ಸಂಸ್ಕಾರಕ್ಕೆ ಸಾವಿರ ರು., ವಿಶೇಷವಾಗಿ ರೈತರು ತಮ್ಮ ಜಮೀನಿನಲ್ಲಿ ಅಕಾಲಿಕ ಮರಣ ಹೊಂದಿದರೆ ಇಲಾಖೆಯಡಿಯಲ್ಲಿ 1 ಲಕ್ಷ ರೈತ ಸಂಜೀವಿನಿ ಯೋಜನೆ ಅಡಿಯಲ್ಲಿ ಪರಿಹಾರ ಹೀಗೆ ಹತ್ತು ಹಲವು ಪ್ರಗತಿಪರ ಯೋಜನೆಗಳು ಜಾರಿಯಲ್ಲಿವೆ. ಗ್ರಾಮೀಣ ಜನರು ನೇರವಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಹೋಗಿ ಯೋಜನೆಯ ಪರಿಹಾರ ಹಾಗೂ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ಹಲವಾರು ಯೋಜನೆಗಳ ಮಾಹಿತಿ ನೀಡಿದರು.
ನಿಯಮಗಳಡಿ ಪಡೆದುಕೊಳ್ಳಿ: ತಾಪಂ ಕಾರ್ಯನಿರ್ವಾಹಣಾಧಿಕಾರಿಗಳಾದ ನರಸಿಂಗ್ರಾವ್‌ತಾಲಿಕ್, ಜಿಪಂ, ತಾಪಂ, ಗ್ರಾಪಂ, ಮಟ್ಟದ ರೈತರ ಮತ್ತು ಕೂಲಿಕಾರ್ಮಿಕರ ಆರ್ಥಿಕ ಸಧೃಡತೆ ಹಾಗೂ ಅನೇಕ ಮೂಲ ಸೌಕರ್ಯಗಳಿಗಾಗಿ ಅನುದಾನವಿದ್ದು, ನೀತಿ ನಿಯಮಗಳಡಿಯಲ್ಲಿ ಅವುಗಳನ್ನು ಪಡೆದುಕೊಳ್ಳಬೇಕು. ಸಮೀಪದ ಪಂಚಾಯತ್ ಕಾರ್ಯದರ್ಶಿಗಳು ಇತರೆ ಗ್ರಾಮ ಮಟ್ಟದ ಅಧಿಕಾರಿಗಳನ್ನು ಜನಸಾಮನ್ಯರು ಸಂಪರ್ಕಿಸಬೇಕು ಎಂದರು.
ಜಿಪಂ, ಎಇಇಕೆ, ಭೀಮರಾಯ ಮಾತನಾಡಿ, ಕುಡಿಯುವ ನೀರಿಗಾಗಿ ಹಾಗೂ ಗ್ರಾಮಮಟ್ಟದ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳ್ಳುತ್ತಿದ್ದು ಅವುಗಳನ್ನು ಸಮಪರ್ಕವಾಗಿ ಬಳಿಕೆ ಮಾಡಿಕೊಳ್ಳಬೆಕು ಎಂದರು.
ವಿವಿಧ ಇಲಾಖೆಗಳು: ಗ್ರಾಮದ ಪ್ರಮುಖ ಶರಣು ಮಂಡಗಳ್ಳಿ ಮಾತನಾಡಿದರು. ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಮಾಜ ಕಲ್ಯಾಣ, ತೋಟಗಾರಿಕೆ, ಅಬಕಾರಿ, ಪೊಲೀಸ್, ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಪಿಡಿಒ ಅಜಿತಕುಮಾರ, ಗ್ರಾಪಂ ಮಾಜಿ ಅಧ್ಯಕ್ಷ ಭೀಮರಾಯಗೌಡ, ಪಾಟೀಲ್ ಸದಸ್ಯರಾದ ಗೌರಮ್ಮ ಮಾಹಾದೇವಪ್ಪ ಬಂಕೂರ, ಗ್ರಾಮ ಲೇಖಪಾಲಕ ಸಿದ್ರಾಮರೆಡ್ಡಿ, ಕಂದಾಯ ನೀರಿಕ್ಷಕ ಸಂಗಮೇಶ ದೇಸಾಯಿ, ಮಾಹಾದೇವರೆಡ್ಡಿ ಸಂಕನೂರ, ದೇವಣ್ಣ ಸಾಹು ಬೇವಿನಳ್ಳಿ, ಭಾಗಣ್ಣ ಗೌಡ ಗರಡಿ, ಮಹೀಬೂಬ್, ಚಂದ್ರಪ್ಪ ದೊರೆ, ಶರಣಪ್ಪ ದೊಡಮನಿ, ಮಲ್ಲಪ್ಪ ಗುಡಿಮನಿ, ಮಾಹಾದೇವಪ್ಪ ಬಂಕೂರ ಗ್ರಾಮಸ್ಥರು ಭಾಗವಹಿಸಿ ತಮ್ಮ ಸಮಸ್ಯಗಳ ಕುರಿತು ಅರ್ಜಿ ಸಲ್ಲಿಸಿದರು. ಸಿದ್ದಪ್ಪ ನಿರೂಪಿಸಿದರು. ವಿವಿಧ ಇಲಾಖೆಗಳಿಗೆ ಸಲ್ಲಿಸಿದ ಅರ್ಜಿಗಳನ್ನು ಪರೀಶೀಲನೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.