ಸುದ್ದಿ ಸಂಕ್ಷೇಪ
ಅತ್ಮೀಯ ಬೀಳ್ಕೊಡುಗೆ
ಗುರುಮಠಕಲ್: ಇಲ್ಲಿನ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಚಂದಯ್ಯ
ಶಾಬ್‌ತಾದಿಯವರಿಗೆ ಸಿಬ್ಬಂದಿ ವರ್ಗದಿಂದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಕೃಷಿ ನಿರ್ದೇಶಕರಾದ ಮಹ್ಮದ ನವೀದ, ಗುರುಮಠಕಲ್ ಕೃಷಿ ಅಧಿಕಾರಿಗಳಾದ ಕೇದಾರನಾಥ, ಹತ್ತಿಕುಣಿ ಕೃಷಿ ಅಧಿಕಾರಿಗಳಾದ ಮಲ್ಲಿನಾಥ ಸೇರಿದಂತೆ ಇಲ್ಲಿನ ರಸಗೊಬ್ಬರ ಮಾರಾಟಗಾರರ ಸಂಘದ ಪದಾಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿವರ್ಗದವರು ಹಾಜರಿದ್ದರು.
'ಪತ್ರಿಕೆಗಳು ಸಮಾಜ ಸುಧಾರಣೆ ಪ್ರಮುಖ ಅಸ್ತ್ರಗಳು'
ಗುರುಮಠಕಲ್: ಮಾಧ್ಯಮ ಕ್ಷೇತ್ರವು, ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿರುವ ಇಂದಿನ ಸಮಾಜದ ಸುಧಾರಣೆ ಮಾಡುವ ಮಹತ್ವದ ಆಸ್ತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸಾಹೇಬರಡ್ಡಿ ಹೇಳಿದ್ದಾರೆ. ಅವರು ಯಾದಗಿರಿ ನಗರದ ಆಯ್ಯಪ್ಪ ಸ್ವಾಮಿ ದೇವಸ್ಥಾನದ ಅವರಣದಲ್ಲಿ ಏರ್ಪಡಿಸಿದ್ದ 'ಅಪ್ನಾದೇಶ ಸಮಾಚಾರ್' ಮಾಸಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾಧ್ಯಮ ಕ್ಷೇತ್ರವು ತನ್ನದೇ ಅದ ಮಹತ್ತರ ಕಾರ್ಯವನ್ನು ನಿರ್ವಹಿಸಿದೆ. ಇಂದಿನ ದಿನಗಳಲ್ಲಿ ಭ್ರಷ್ಟಾಚಾರದ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಲಿರುವುದು ಸಂತೋಷದ ಸಂಗತಿಯಾಗಿದ್ದು ಮಾಧ್ಯಮಗಳಿಂದಲೇ ಸಮಾಜದ ಸುಧಾರಣೆ ಸಾಧ್ಯ ಎಂದರು. ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ಅಧ್ಯಕ್ಷರಾದ ಎ. ಆರ್. ಮಹೇಂದ್ರಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಅಪ್ನಾದೇಶ್ ಅಸೋಸಿಯೇಶನ್ ಬಳಗದ ಜಿಲ್ಲಾ ಸಂಚಾಲಕರಾದ ಸೈದಪ್ಪ ಕೆ. ಗುತ್ತೇದಾರ, ನಿವೃತ್ತ ಶಿಕ್ಷಕ ಶಂಕ್ರಪ್ಪ ಹುನುಗುಂಟಿ, ಸಿದ್ದಪ್ಪ ಲಿಂಗೇರಿ ಹಾಜರಿದ್ದರು.
ಬೈಕ್ ಡಿಕ್ಕಿ: ಯುವಕ ಸಾವು
ಹುಣಸಗಿ: ಸಮೀಪದ ದ್ಯಾಮನಹಾಳ ಗ್ರಾಮದ ಸಮೀಪ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಮೃತವ್ಯಕ್ತಿಯು ದ್ಯಾಮನಹಾಳ ಗ್ರಾಮದ ತಿಪ್ಪಣ್ಣ ಹಾವೇರಿ(23) ಎಂದು ತಿಳಿದು ಬಂದಿದೆ. ಇನ್ನೋರ್ವ ರಾಜುಗೌಡ ಮಾಲಿ ಪಾಟೀಲ ಕುಪ್ಪಿ ಎಂಬುವರಿಗೆ ಗಾಯವಾಗಿದ್ದು, ಲಿಂಗಸ್ಗೂರು ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹುಣಸಗಿ ಸರ್ಕಲ್ ಇನ್ಸಕ್ಟರ್ ವಿಜಯ ಮುರಗುಂಡಿ ಭೇಟಿ ನೀಡಿ ಪರಿಶೀಲಿಸಿದ್ದು, ಸಬ್‌ಇನ್ಸಪೆಕ್ಟರ್ ಮಂಜುನಾಥ ಸಿರಿವೇರಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತಮ ಸೇವೆ ನೀಡಿದ ಸಂತೃಪ್ತಿಯಿದೆ: ನ್ಯಾ. ರವೀಂದ್ರ
ಸುರಪುರ: ನ್ಯಾಯಾಲಯಕ್ಕೆ ಬಂದ ಕಕ್ಷಿದಾರರಿಗೆ ನ್ಯಾಯ ಸಮ್ಮತ ತೀರ್ಪು ನೀಡಿರುವ ತೃಪ್ತಿ ತಮಗಿದೆ ಎಂದು ಇಲ್ಲಿಯ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಕಾರಭಾರಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಕೀಲರ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಉದಯಸಿಂಗ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಧೀಶ ಶಶಿಧರಗೌಡ, ವಕೀಲರಾದ ಮಹ್ಮದ ಹುಸೇನ್, ಜಿ. ತಮ್ಮಣ್ಣ, ಜಿ.ಎಸ್. ಪಾಟೀಲ್, ಅಪ್ಪಸಾಹೇಬ ಪಾಟೀಲ್, ಎಸ್‌ಎಂ ಕನಕರೆಡ್ಡಿ, ಎಸ್. ಸಿದ್ರಾಮಪ್ಪ, ಬಿ.ಎಚ್. ಕಿಲ್ಲೆದಾರ್, ಶಿವಾನಂದ ಅವಂಟಿ, ಯಂಕಾರೆಡ್ಡಿ ಹವಲ್ದಾರ್, ಹಿರೇಮಠ, ಬನ್ನಾಳೆ ಹಲವರಿದ್ದರು.