ಕನ್ನಡಪ್ರಭ- ಎಕ್ಸ್‌ಪ್ರೆಸ್ ಬಳಗದ ರವೀಂದ್ರ ತಿಪ್ಪಾ ನಿಧನ
ಗುಲ್ಬರ್ಗ: ಕನ್ನಡಪ್ರಭ, ಇಂಡಿಯನ್ ಎಕ್ಸಪ್ರೆಸ್ ಗುಲ್ಬರ್ಗ ಆವೃತ್ತಿಯಲ್ಲಿ ಸಹಾಯಕ ಪೇಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರವೀಂದ್ರ ತಿಪ್ಪಾ(39) ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ಬುಧವಾರ ಚಿತ್ತಾಪುರ ತಾಲೂಕಿನ ಮತ್ತಿಮಡು ಗ್ರಾಮದಲ್ಲಿ ನಿಧನರಾದರು.ಕಳೆದ 8 ವರ್ಷದಿಂದ ಎಕ್ಸ್‌ಪ್ರೆಸ್ ಪಬ್ಲಿಕೇಷನ್ಸ್ ಮಧುರೈ ಲಿ. ಕಂಪನಿಯಲ್ಲಿ ಕೆಲಸದಲ್ಲಿದ್ದ ರವೀಂದ್ರ ತಿಪ್ಪಾ ಮಂಗಳೂರು ಆವೃತ್ತಿಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಗುಲ್ಬರ್ಗದಲ್ಲಿ 2008ರಲ್ಲಿ ಹೊಸ ಆವೃತ್ತಿ ಶುರುವಾದಾಗ ಕಂಪನಿ ಅವರನ್ನು ತವರು ಜಿಲ್ಲೆಗೆ ವರ್ಗ ಮಾಡಿತ್ತು.
ಸ್ನೇಹಜೀವಿಯಾಗಿದ್ದ ರವೀಂದ್ರ ಅವರ ಅಕಾಲಿಕ ನಿಧನಕ್ಕೆ ಪತ್ರಿಕಾ ಕಚೇರಿಯ ಪ್ರೊಡಕ್ಷನ್ ವಿಭಾಗದ ವೆಂಕಟರಾವ ಕೊಂಪೆಲ್ಲಾ, 'ಕನ್ನಡಪ್ರಭ' ಪ್ರಧಾನ ವರದಿಗಾರ ಶೇಷಮೂರ್ತಿ ಅವಧಾನಿ, ಉಪ ಸಂಪಾದಕ ರಾಮಲಿಂಗ ರಾಠೋಡ, ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಗಾರ ರಾಮಕೃಷ್ಣ ಬಡಶೇಷಿ, ಮಾರ್ಕ್ಸ್ ತೇಜಸ್ವಿ, ಜಾಹೀರಾತು ಸಹಾಯಕ ವ್ಯವಸ್ಥಾಪಕ ನೌಶಾದ್, ಎಕ್ಸಿಕ್ಯೂಟಿವ್‌ಗಳಾದ ಗೋವಿಂದ ಆಲೂರಕರ್, ಹನುಮೇಶ, ಇಲೆಕ್ಟ್ರಾನಿಕ್ಸ್- ಕಮ್ಯೂನಿಕೇಷನ್ ಎಂಜಿನಿಯರ್ ವೆಂಕಟೇಶ ಕುಲ್ಕರ್ಣಿ ನೆಲೋಗಿ, ಪ್ರಸರಣ ವಿಭಾಗದ ಜಯಪ್ರಕಾಶ, ರಾಘವೇಂದ್ರ ಮುದ್ಗಲ್, ಜನರಲ್ ಅಕೌಂಟ್ಸ್‌ನ ಮಧುಸೂಧನ, ಚೆನ್ನವೀರ, ಸುದರ್ಶನ, ಸಿಆರ್‌ಇ ರಾಜೇಶ್ವರಿ, ಪ್ಯಾಕಿಂಗ್‌ನ ಮಲ್ಲಿಕಾರ್ಜುನ, ಸಹಾಯಕ ಪೇಸ್ಟರ್‌ಗಳಾದ ಕಿರಣ, ಅಬ್ದುಲ್ ಶಫಿ ಹಾಗೂ ಕಚೇರಿ ಸಹಾಯಕ ಸಂತೋಷ ಸಾವಳಗಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಹುಟ್ಟೂರು ಮತ್ತಿಮಡು ಗ್ರಾಮದಲ್ಲಿ ರವೀಂದ್ರ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಬುಧವಾರ ನೆರವೇರಿತು.