ಕನ್ನಡಪ್ರಭದ ಸಹಾಯಕ ಪೇಸ್ಟರ್ ರವೀಂದ್ರ ತಿಪ್ಪಾ ನಿಧನ
ಗುಲ್ಬರ್ಗ: ಕನ್ನಡಪ್ರಭ, ಇಂಡಿಯನ್ ಎಕ್ಸ್ಪ್ರೆಸ್ ಗುಲ್ಬರ್ಗ ಆವೃತ್ತಿಯಲ್ಲಿ ಸಹಾಯಕ ಪೇಸ್ಟರ್ ಆಗಿ ಕೆಲಸ ಮಾಡುತ್ತಿದ್ದ ರವೀಂದ್ರ ಎಸ್ ತಿಪ್ಪಾ (39) ಅವರು ಅಲ್ಪಕಾಲದ ಅಸ್ವಸ್ಥತೆಯಿಂದಾಗಿ ಬುಧವಾರ ಬೆಳಗ್ಗೆ ನಿಧರಾದರು. ಕಳೆದ 8 ವರ್ಷದಿಂದ ಎಕ್ಸ್ಪ್ರೆಸ್ ಪಬ್ಲಿಕೇಷನ್ ಮದುರೈ ಲಿಮಿಟೆಡ್ ಕಂಪನಿಯಲ್ಲಿ ಕೆಲಸದಲ್ಲಿದ್ದ ರವೀಂದ್ರ ತಿಪ್ಪಾ ಮಂಗಳೂರು ಆವೃತ್ತಿಯೊಂದಿಗೆ ಅಸಿಸ್ಟಂಟ್ ಪೇಸ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. 2008ರಲ್ಲಿ ಗುಲ್ಬರ್ಗದಲ್ಲಿ ಕನ್ನಡಪ್ರಭ- ಇಂಡಿಯನ್ ಎಕ್ಸ್ಪ್ರೆಸ್ ಹೊಸ ಆವೃತ್ತಿ ಶುರುವಾದಾಗ ಗುಲ್ಬರ್ಗಕ್ಕೆ ಆಗಮಿಸಿದ್ದರು. ತಿಪ್ಪಾ ಹುಟ್ಟೂರಾದ ಚಿತ್ತಾಪುರ ತಾಲೂಕಿನ ಮತ್ತಿಮಡು ಗ್ರಾಮದಲ್ಲಿ ಬುಧವಾರ ಅಂತ್ಯಸಂಸ್ಕಾರ ನಡೆಯಿತು.